ಚೆನ್ನೈ: ನಟ ಧನುಷ್-ಐಶ್ವರ್ಯಾ ರಜನಿಕಾಂತ್‌ಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ.
ಇತ್ತೀಚೆಗೆ ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ವಾರ ನ್ಯಾಯಾಲಯದ ವಿಚಾರಣೆಯಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದರು.
ನ್ಯಾಯಾಲಯವು ಒಮ್ಮತದ ಆಧಾರದ ಮೇಲೆ ತೀರ್ಪು ನೀಡಿದೆ. ನಟ ಧನುಷ್ 2004ರಲ್ಲಿ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾಗೆ ವಿವಾಹವಾಗಿದ್ದರು. ಇಬ್ಬರು 2022ರಲ್ಲಿ ಪ್ರತ್ಯೇಕವಾಗಿದ್ದರು.
				
															
                    
                    
                    
                    
                    
































