ಪಾಟ್ನಾ :ಪುಣೆಯಿಂದ ಬರುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಯದಲ್ಲಿ ಡಿಜೆ ಲೇಸರ್ ಬೆಳಕು ಹಾಯಿಸಿದ ಪರಿಣಾಮ ಲ್ಯಾಂಡಿಂಗ್ ಕಾರ್ಯಾಚರಣೆ ವೇಳೆ ಸಮತೋಲನ ತಪ್ಪಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆದ್ರೆ ಪೈಲಟ್‌ನ ಸಾಹಸದಿಂದಾಗಿ ಯಾವುದೇ ದುರಂತ ಸಂಭವಿಸಿದೇ ನೂರಾರು ಜನರ ಪ್ರಾಣ ಉಳಿದಿದೆ.
ಗುರುವಾರ (ನಿನ್ನೆ) ಪುಣೆಯಿಂದ ಹೊರಟಿದ್ದ ಇಂಡಿಗೋ ವಿಮಾನ ಪಾಟ್ನಾ ಏರ್‌ಪೋರ್ಟ್‌ನಲ್ಲಿ ಸಂಜೆ 6:40ಕ್ಕೆ ಲ್ಯಾಂಡ್ ಆಗಬೇಕಿತ್ತು. ಈ ವೇಳೆ ಯಾರೋ ಡಿಜೆ ಲೇಸರ್ ಬೆಳಕು ಹಾಯಿಸಿದ್ದಾರೆ.
ಲೇಸರ್ ಬೆಳಕು ಕಾಕ್‌ಪಿಟ್‌ಗೆ ರಾಚಿದ್ದರಿಂದ ಪೈಲಟ್‌ಗೆ ಗೊಂದಲ ಉಂಟಾಗಿದೆ. ಜೊತೆಗೆ ವಿಮಾನ ನಿಯಂತ್ರಣ ಕಳೆದುಕೊಂಡಿದೆ, ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್ ವಿಮಾನವನ್ನು ಹತೋಟಿಗೆ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.