ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು. ಆದ್ರೆ ಈ ಯೋಜನೆಯ ಹಣ ಬಿಡುಗಡೆಯಾಗದ ಕಾರಣ ಹಲವಾರು ಮಹಿಳೆಯರು ಆತಂಕಗೊಂಡಿದ್ದಾರೆ.
ಇದೀಗ ಎಲ್ಲಾ ಪೆಂಡಿಂಗ್ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಭರವಸೆ ನೀಡಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ
ಮಾತನಾಡಿ, ಗೃಹಲಕ್ಷ್ಮ್ ಹಣ ಮೂರು ತಿಂಗಳಿಂದ ಬಂದಿಲ್ಲ. ಈ ಮೂರು ತಿಂಗಳ 6000 ರೂ. ಹಣವನ್ನು ನಾವು ಹಾಕುತ್ತೇವೆ ಎಂದಿದ್ದಾರೆ.