ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದರೆ ತುಂಬಾ ಒಳ್ಳೆಯದು. ಇದು ದೇಹವನ್ನು ಹೈದ್ರೀಕರಿಸುತ್ತದೆ ಮತ್ತು ತಂಪಾಗಿಸುತ್ತದೆ. ಆದರೆ, ಇದನ್ನು ಮಾತ್ರ ಸರಿಯಾದ ಸಮಯದಲ್ಲಿ ಸೇವಿಸಬೇಕು.
ಕಲ್ಲಂಗಡಿ ಹಣ್ಣನ್ನು ಬೆಳಗ್ಗೆ ಹಾಗೂ ರಾತ್ರಿಯ ವೇಳೆ ತಿನ್ನಬಾರದು. ಯಾಕೆಂದರೆ, ಆ ವೇಳೆಯಲ್ಲಿ ವಾತಾವರಣ ತಂಪಾಗಿರುವುದರಿಂದ ಶೀತ, ಕಫದ ಸಮಸ್ಯೆ ಕಾಡಬಹುದು. ಹಾಗಾಗಿ, ಬೆಳಗ್ಗೆ 11 ಗಂಟೆಯ ನಂತರ ಮಧ್ಯಾಹ್ನ 3 ಗಂಟೆಯೊಳಗೆ ಸೇವಿಸಿದರೆ ತುಂಬಾ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ.!