ನಿಮ್ಮ ಮೂತ್ರಪಿಂಗಳು ಅಂದರೆ ಕಿಡ್ನಿ ನಿಮ್ಮ ದೇಹದ ರಾಸಾಯನಶಾಸ್ತ್ರವನ್ನು ಎಲ್ಲ ಸಮಯದಲ್ಲೂ ಸಮತೋಲನವಾಗಿಡಲು ಸಹಾಯ ಮಾಡುತ್ತದೆ. ಮೂತ್ರ ವಿಸರ್ಜಿನೆಯಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ದೇಹದಿಂದ ಹೊರಹಾಕುವವರೆಗೆ ಕಿಡ್ನಿ ನಿಮ್ಮ ದೇಹದ ಅತಿ ಹೆಚ್ಚು ಕೆಲಸಮಾಡುವ ಅಂಗಗಳಲ್ಲಿ ಒಂದು. ಅವು ವಿಫಲಗೊಳ್ಳುವ ಲಕ್ಷಣಗಳನ್ನು ತೋರಿಸಿದಾಗ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ.
ಕಿಡ್ನಿಯ ಕಾರ್ಯ ಕ್ಷಮತೆಯು ಕ್ಷೀಣಿಸಲು ಪ್ರಾರಂಭಿಸಿದಾಗ ನಿಮ್ಮ ದೇಹವು ಕೆಲವು ಸೂಕ್ಷ್ಮ ಸೂಚನೆಗಳನ್ನು ನೀಡುತ್ತದೆ. ಇದನ್ನು ಕೂಡಲೇ ಗಮನಿಸಿ ತಕ್ಷಣ ಚಿಕಿತ್ಸೆ ಪಡೆಯುವುದರಿಂದ ಹೆಚ್ಚಿನ ಹಾನಿಯನ್ನು ತಡೆಯಬಹುದಾಗಿದೆ. ಮುಖ್ಯವಾಗಿ ನಿಮಗೆ ಮಧುಮೇಹ , ಅಧಿಕ ರಕ್ತದೊತ್ತಡ ಇದ್ದರೆ ಈ ಕೆಳಗಿನ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.
ಊದಿಕೊಂಡ ಮುಖ : ವಿಶೇಷವಾಗಿ ಬೆಳಗ್ಗಿನ ಸಮಯದಲ್ಲಿ ನಿಮ್ಮ ಮುಖ ಮತ್ತು ಕಣ್ಣುಗಳು ಊದಿಕೊಂಡಿದ್ದರೆ ಇದು ತಡವಾಗಿ ಎಚ್ಚರ ಆಗಿದ್ದು ಅಥವಾ ಅಲರ್ಜಿ ಸಮಸ್ಯೆ ಮಾತ್ರ ಅಲ್ಲ , ಗಂಭೀರ ಕಿಡ್ನಿ ಸಮಸ್ಯೆ ಆಗಿರಬಹುದು.ನಿಮ್ಮ ಕಿಡ್ನಿಗಳು ತ್ಯಾಜ್ಯ ಮತ್ತು ದ್ರವವನ್ನು ಸರಿಯಾಗಿ ಫಿಲ್ಟರ್ ಮಾಡಲಾಗದೆ ಇದ್ದಾಗ ನಿಮ್ಮ ಮುಖ ಊದಿಕೊಳ್ಳುವ ಸಂಭವ ಇರುತ್ತದೆ.
ನೊರೆ ಮತ್ತು ಗುಳ್ಳೆ ಮೂತ್ರ : ನಿಮ್ಮ ಬೆಳಗ್ಗಿನ ಮೊದಲ ಮೂತ್ರವು ನೊರೆ ಮತ್ತು ಗುಳ್ಳೆಯಾಗಿದ್ದರೆ ಅದನ್ನು ಪ್ರೊಟೀನುರಿಯ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಗ್ಲೊಮೆರುಲರ್ ಹಾನಿಯ ಪ್ರಾರಂಭಿಕ ಸೂಚನೆ ಆಗಿರಬಹುದು. ಪುನರಾವರ್ತಿತ ನೊರೆ ಮೂತ್ರವು ನಿಮ್ಮ ಕಿಡ್ನಿ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
3.ಒಣ ಮತ್ತು ತುರಿಕೆ ಚರ್ಮ : ಬೆಳಿಗ್ಗೆ ನಿಮ್ಮ ಚರ್ಮದ ಮೇಲೆ ಸ್ಕ್ರಾಚಿಂಗ್ ಮತ್ತು ಶುಷ್ಕತೆಯನ್ನು ಹೊಂದಿದ್ದರೇ ಅದು ನಿಮ್ಮ ಮೂತ್ರ ಪಿಂಡದ ವೈಫಲ್ಯದ ಮೊದಲ ಸಂಕೇತವಾಗಿರಬಹುದು. ತ್ಯಾಜ್ಯ ಉತ್ಪನ್ನಗಳ ಸಂಗ್ರಹ ಮತ್ತು ಫಾಸ್ಪರಸ್ ನಂತಹ ಖನಿಜಗಳಲ್ಲಿನ ಅಸಮತೋಲನದಿಂದ ಇದು ಉಂಟಾಗುತ್ತದೆ.
ತಲೆತಿರುಗುವಿಕೆ : ನಿಮ್ಮ ಕಿಡ್ನಿಗಳು ನಿಮ್ಮ ದೇಹದಿಂದ ಎಲ್ಲ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ , ವಿಷವು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ತಲೆತಿರುಗುವಿಕೆ ಮತ್ತು ಏಕಾಗ್ರತೆಗೆ ತೊಂದರೆ ಉಂಟು ಮಾಡುತ್ತದೆ.
ದುರ್ವಾಸನೆ : ನಿಮ್ಮ ಕಿಡ್ನಿ ತ್ಯಾಜ್ಯವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಅದು ಯುರೇಮಿಯ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಇಂದು ನಿಮ್ಮ ಬಾಯಿಯ ದುರ್ವಾಸನೆ ಉಂಟು ಮಾಡುವುದಲ್ಲದೆ ನಿಮ್ಮ ರಕ್ತಪ್ರವಾಹದಲ್ಲಿರುವ ವಿಷವು ಆಹಾರಕ್ಕೆ ಅಸಹ್ಯಕರ ರುಚಿಯನ್ನು ನೀಡುತ್ತದೆ.