ಕರಾವಳಿಯಲ್ಲಿ ಆಗಾಗ ಮಳೆ ಬರುತ್ತಿದ್ದರೂ ಕೂಡಾ ಈ ಬೇಸಿಗೆ ಕಾಲದಲ್ಲಿ ನೆತ್ತಿ ಸುಡುವ ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗದಷ್ಟು ಜನರು ಹೈರಾಣಾಗುತ್ತಿದ್ದಾರೆ. ಇಷ್ಟೊಂದು ಸೂರ್ಯನ ಪ್ರಖರ ಕಿರಣಗಳಿದ್ದರೂ ಕೂಡಾ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತಿದೆ. ಮನುಷ್ಯನ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕವಾಗಿದೆ. ಹಾಗಾದರೆ ಈ ವಿಟಮಿನ್ ಡಿ ಮಟ್ಟವನ್ನು ಹೇಗೆ ಸುಧಾರಿಸಿಕೊಳ್ಳಬಹುದು ನೋಡೋಣ…
ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಮೈಯೊಡ್ಡಿ ನಿಂತುಕೊಳ್ಳಬೇಕು. ತಜ್ಞರ ಪ್ರಕಾರ ಬಿಸಿಲಿಗೆ ಹೋಗುವಾಗ ಹೆಚ್ಚು ಸನ್ ಸ್ಕ್ರೀನ್ ಹಚ್ಚಿಕೊಳ್ಳಬಾರದು. ಏಕೆಂದರೆ ಇದು ವಿಟಮಿನ್ ಡಿ ಉತ್ಪಾದನೆಗೆ ಅಗತ್ಯವಾದ ಯುವಿಬಿ ಕಿರಣಗಳನ್ನು ನಿರ್ಬಂಧಿಸುತ್ತದೆ.
ಇನ್ನು ವಿಟಮಿನ್ ಡಿ ಮಟ್ಟ ಹೆಚ್ಚಾಗಲು ವಾರಕ್ಕೊಮ್ಮೆ ಹೆಚ್ಚು ಕೊಬ್ಬಿನ ಅಂಶವಿರುವ ಮೀನುಗಳನ್ನು ಸೇವಿಸಬೇಕು. ವಾರಕ್ಕೆ ಎರಡರಿಂದ ಮೂರು ಬಾರಿ ಊಟದಲ್ಲಿ ಮೀನುಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಅಲ್ಲದೆ ಮೊಟ್ಟೆಯ ಹಳದಿ ಅಂಶವನ್ನು ಊಟದಲ್ಲಿ ಸೇರಿಸಿದರೆ ಕೂಡಾ ಹೇರಳವಾದ ವಿಟಮಿನ್ ಡಿ ಅಂಶ ಲಭಿಸುತ್ತದೆ.