ಬೆಳಗ್ಗೆ ಬೇಗನೆ ಎದ್ದೇಳಬೇಕು, ಆರೋಗ್ಯಕರ ಜೀವನ ನಡೆಸಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಆದರೆ ಅಲಾರ್ಮ್ ಹೊಡೆದರೂ ಎಚ್ಚರವೇ ಆಗಲ್ಲ. ಎಚ್ಚರವಾದರೂ ಎದ್ದೇಳಲು ಮನಸ್ಸೇ ಆಗಲ್ಲ. ಅನೇಕರಿಗೆ ಪುಸ್ತಕ ಹಿಡಿದ ತಕ್ಷಣವೇ ನಿದ್ದೆ ಬರಲು ಆರಂಭವಾಗುತ್ತದೆ. ಸೋ, ಮಲಗುವ ಮೊದಲು ಈ ತಂತ್ರವು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಒಂದು NIH ಅಧ್ಯಯನದ ಪ್ರಕಾರ, ಮಲಗುವ ಮೊದಲು ಪುಸ್ತಕ ಓದುವುದು, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಉತ್ತಮವಾಗಿದೆ. ಗಾಢ ನಿದ್ರೆಯಲ್ಲಿ ನಿಮ್ಮ ಅಲಾರಂ ಅನ್ನು ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸ ಹೊಂದಿದ್ದರೆ, ಅದನ್ನು ತಡೆಯಲು ಅಲಾರಾಂ ಅನ್ನು ನೀವು ಮಲಗುವ ಸ್ಥಳಕ್ಕಿಂತ, ಕೆಲವು ಅಡಿ ದೂರದಲ್ಲಿ ಇರಿಸಿ. ಇದರಿಂದ ಅಲಾರಾಂ ಆಫ್ ಮಾಡಲು ನೀವು ಎದ್ದೇಳಬೇಕು ಅಲ್ಲವೇ? ಈ ಅಭ್ಯಾಸ ನಿಮಗೆ ಬೇಗನೆ ಎದ್ದೇಳಲು ಸಹಾಯ ಮಾಡುತ್ತದೆ.
ಮಲಗುವ ಆರು ಗಂಟೆಗಳ ಮೊದಲು ಕೆಫೀನ್ ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಅಂತೆಯೇ, ಮಲಗುವ ಮುನ್ನ ಆಲ್ಕೋಹಾಲ್ ಕುಡಿಯುವುದು ಸಹ ಉತ್ತಮವಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ. ಬೆಳಗ್ಗೆ ನೀವು ಹಾಸಿಗೆಯಿಂದ ಬೇಗ ಎದ್ದೇಳಲು ಪ್ರಯತ್ನಿಸುತ್ತಿರುವಾಗ, ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಕುರಿತು ಎಚ್ಚರ ವಹಿಸಿ. ಪೇಪರ್‌ಬ್ಯಾಕ್ ಪುಸ್ತಕ ಅಥವಾ ನಿಯತಕಾಲಿಕವನ್ನು ಓದುವ ಮೂಲಕ ಹಳೆಯ ಓದುವ ವಿಧಾನವನ್ನು ಅನುಸರಿಸಿ. ಸ್ಮಾರ್ಟ್ ಪೋನ್‌ನಲ್ಲಿ ಓದುವುದು ಬೇಡ.