ಬೇಸಿಗೆಯಲ್ಲಿ ಎಂಥವರು ಕೂಡ ಹೆಚ್ಚಾಗಿ ಬೆವರುತ್ತಾರೆ. ಬಿಸಿಲಿನಿಂದ ಕೆಲವರಿಗೆ ವಿಪರೀತ ಬೆವರು ಬರುವುದರಿಂದ ಬೆವರಿನ ವಾಸನೆ ಅಸಹನೀಯ ಎನಿಸಿಕೊಂಡು ಬಿಡುತ್ತೆ. ಬೇಸಿಗೆಯಲ್ಲಿ ಸ್ನಾನ ಮಾಡಿದರೂ ಅತಿಯಾದ ಬೆವರಿನಿಂದ ದುರ್ವಾಸನೆ ಉಂಟಾಗುತ್ತೆ. ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳು ಕೆಟ್ಟ ವಾಸನೆಗೆ ಕಾರಣವಾಗುತ್ತವೆ. ಬೆವರಿನ ವಾಸನೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಟಿಪ್ಸ್
ನಿಂಬೆ ನೀರು ಹಾಗೂ ಮೊಸರು : ಬೆವರಿನ ವಾಸನೆ ಬರುವುದು ತಪ್ಪಿಸಲು ಸರಿಯಾದ ಆಹಾರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ ಆಹಾರದಲ್ಲಿ ನಿಂಬೆ ನೀರು ಹಾಗೂ ಮೊಸರನ್ನು ಸೇರಿಸಿಕೊಳ್ಳಿ. ಇದು ಬೆವರಿನಲ್ಲಿ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಬ್ಯಾಗ್ : ನಿಮ್ಮ ಮನೆಯಲ್ಲಿ ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು, ಈ ನೀರನ್ನು ಕಂಕುಳ ಭಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿದರೆ ಬೆವರಿನ ದುರ್ನಾತವು ದೂರವಾಗುತ್ತದೆ.
ರೋಸ್ ವಾಟರ್ ಬಳಸಿ : ಸ್ನಾನಕ್ಕೆ ಬಳಸುವ ಸ್ನಾನದ ನೀರಿಗೆ ಸ್ವಲ್ಪ ರೋಸ್ ವಾಟರ್ ಬೆರೆಸಬಹುದು. ಈ ರೋಸ್ ವಾಟರ್ ಹಗುರವಾದ ಪರಿಮಳವನ್ನು ನೀಡಿ, ಬೆವರಿನ ವಾಸನೆಯೂ ಕಡಿಮೆಯಾಗುತ್ತದೆ.
ನೀರಿಗೆ ಹರಳೆಣ್ಣೆ ಬೆರೆಸಿ ಸ್ನಾನ ಮಾಡಿ : ಅತಿಯಾಗಿ ಬೆವರುತ್ತಿದ್ದರೆ, ಸ್ನಾನ ಮಾಡುವ ಮೊದಲು ಒಂದೆರಡು ಚಮಚ ಹರಳೆಣ್ಣೆ ನೀರಿಗೆ ಸೇರಿಸಿಕೊಳ್ಳಿ. 5 ರಿಂದ 8 ನಿಮಿಷಗಳ ಕಾಲ ನಿಮ್ಮ ಕಂಕುಳಲ್ಲಿ ಮಸಾಜ್ ಮಾಡಿ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈ ಬೆವರಿನ ವಾಸನೆಯಿಂದ ಮುಕ್ತಿ ಪಡೆಯಬಹುದು.
ನೀಲಗಿರಿ ತೈಲ : ಬೆವರಿನಿಂದ ಉಂಟಾಗುವ ವಾಸನೆಯನ್ನು ತಪ್ಪಿಸಲು ಸ್ನಾನದ ನೀರಿಗೆ ನೀಲಗಿರಿ ಎಣ್ಣೆಯನ್ನು ಸೇರಿಸಬಹುದು. ಇವು ಬೆವರಿನಿಂದ ಉಂಟಾಗುವ ವಾಸನೆಯನ್ನು ನಿವಾರಿಸುವುದಲ್ಲದೆ, ಚರ್ಮವನ್ನು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ.
ಈ ತರಕಾರಿ ಬಳಸಿ : ಬದನೆಕಾಯಿ ಹೋಳುಗಳನ್ನು ನೆನೆಸಿದ ನೀರಿನಲ್ಲಿ ಮೈ ಕೈ ತೊಳೆಯುತ್ತಿದ್ದರೆ ಬೆವರುವುದು ಕಡಿಮೆಯಾಗುತ್ತದೆ. ಅದಲ್ಲದೇ, ಆಲೂಗಡ್ಡೆಯನ್ನು ತುಂಡರಿಸಿ ಹತ್ತು ನಿಮಿಷಗಳ ಕಾಲ ಕಂಕುಳಿನ ಭಾಗದಲ್ಲಿ ಉಜ್ಜುವುದರಿಂದ ಅತಿಯಾಗಿ ಬೆವರುವುದು ಹಾಗೂ ಬೆವರಿನ ವಾಸನೆಯಿಂದ ಮುಕ್ತಿ ಪಡೆಯಬಹುದು. ಇಲ್ಲದಿದ್ದರೆ ಮುಳ್ಳು ಸೌತೆಯ ಹೋಳುಗಳಿಂದ ಬೆವರುವ ಜಾಗವನ್ನು ಉಜ್ಜಿಕೊಳ್ಳುವುದು ಪರಿಣಾಮಕಾರಿಯಾಗಿದೆ.