ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಇದಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ತೆಂಗಿನ ಕಾಯಿ ಇಲ್ಲದೆ ಯಾವುದೇ ಅಡುಗೆ ಕೂಡಾ ಸಂಪೂರ್ಣವಾಗುವುದಿಲ್ಲ. ಕರಾವಳಿಗರಿಗಂತೂ ಅಡುಗೆಗೆ ಇದು ಬೇಕೇ ಬೇಕು. ಅತ್ಯಂತ ಪ್ರಯೋಜನಕಾರಿಯಾದ ತೆಂಗಿನ ಕಾಯಿಯ ಎಣ್ಣೆ ಕೂಡಾ ಚರ್ಮಕ್ಕೆ ಮತ್ತು ಆರೋಗ್ಯಕ್ಕೆ ಅನುಕೂಲಕಾರಿ. ಇದೀಗ ನಾವು ಹೇಳಹೊರಟಿರುವುದು ತೆಂಗಿನ ಹಾಲಿನ ಬಗ್ಗೆ. ಸೌಂದರ್ಯವರ್ಧಕವಾಗಿ ಕೆಲಸ ಮಾಡುವುದಲ್ಲದೆ ಮಾಂಸಹಾರ ಪದಾರ್ಥದ ಸ್ವಾದವನ್ನೂ ಇದು ದುಪ್ಪಟ್ಟುಗೊಳಿಸುತ್ತದೆ.
ತೆಂಗಿನ ಹಾಲಿನಲ್ಲಿ ಸಮೃದ್ಧವಾದ ಜೀವಸತ್ವವಿದೆ. ಇದರಲ್ಲಿ ಜೀವಸತ್ವ, ಕಬ್ಬಿಣ ಅಂಶಗಳು, ಪೋಷಕಾಂಶಗಳು ಅತ್ಯಂತ ಹೇರಳವಾಗಿರುವುದರಿಂದ ರಕ್ತ ಪರಿಚಲನೆಗೆ ಕೂಡಾ ಅತ್ಯಂತ ಪ್ರಯೋಜನಕಾರಿಯಾಗಿದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮೂಳೆಗಳು ಸ್ನಾಯುಯುತವಾಗಿರಲು ಮತ್ತು ನರಗಳ ಆರೋಗ್ಯಕ್ಕೆ ಇದು ಪುಷ್ಠಿ ನೀಡುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಕೊಲೆಸ್ಟ್ರಾಲ್ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹೃದಯಾಘಾತ, ಹೃದಯಸ್ಥಂಬನದಂತಹ ಅಪಾಯಕಾರಿ ಸಾಧ್ಯತೆಯನ್ನು ಕೂಡಾ ಇದು ತಪ್ಪಿಸುತ್ತದೆ.
ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ತೆಂಗಿನಹಾಲಿನಲ್ಲಿ ಆರೋಗ್ಯ ವರ್ಧಿಸುವ ಕೊಬ್ಬಿನ ಅಂಶಗಳು ಸೇರಿರುವುದರಿಂದ ಜೀರ್ಣಕ್ರಿಯೆಗೆ ಕೂಡಾ ಸಹಕರಿಸುತ್ತದೆ. ಇದರಿಂದ ದೈಹಿಕ ತೂಕವನ್ನು ಸಮತೋಲನದಲ್ಲಿಡಬಹುದು. ತೆಂಗಿನ ಹಾಲಿನಲ್ಲಿರುವ ಆರೋಗ್ಯಕರ ಕೊಬ್ಬುಗಳು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ಮತ್ತು ಆರೋಗ್ಯಕರ ಕರುಳಿನ ವಾತಾವರಣವನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ರೋಗನಿರೋಧಕ ಶಕ್ತಿಯನ್ನು ಹೊಂದಿದೆ.
ತೆಂಗಿನ ಹಾಲು ತ್ವಚೆಯ ಆರೋಗ್ಯವನ್ನು ಕಾಪಾಡುವುದರಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತದೆ. ತೆಂಗಿನ ಹಾಲಿನಲ್ಲಿ ಸೌಂದರ್ಯವನ್ನು ಪ್ರೇರೇಪಿಸುವ ಉತ್ತಮ ಅಂಶಗಳಿವೆ. ಮಹಿಳೆಯರು ಇದನ್ನು ಮುಖದ ಸೌಂದರ್ಯಕ್ಕೆ ಹೆಚ್ಚಾಗಿ ಸೌಂದರ್ಯವರ್ಧಕವಾಗಿ ಬಳಸುತ್ತಾರೆ. ಮೂಳೆಯ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. ಒಟ್ಟಾರೆಯಾಗಿ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ತೆಂಗಿನ ಹಾಲು ಅತ್ಯಂತ ಪ್ರಯೋಜನಕಾರಿಯಾಗಿದೆ. ನಮ್ಮ ನಿತ್ಯ ಆಹಾರ ಕ್ರಮದಲ್ಲಿ ತೆಂಗಿನ ಹಾಲನ್ನು ಸೇವಿಸಿದರೆ ಆರೋಗ್ಯಕ್ಕೆ ವಿವಿಧ ರೀತಿಯ ಅನುಕೂಲತೆಗಳಿವೆ.