ಬೇಸಿಗೆ ಕಾಲದಲ್ಲಿ ನಮಗೆ ಅನೇಕ ರೀತಿಯ ಹಣ್ಣುಗಳನ್ನು ಸ್ವಾದಿಸಬೇಕು ಎಂಬ ಇಚ್ಛೆಯಿರುತ್ತದೆ. ಅದರಲ್ಲೂ ಪಪ್ಪಾಯ ಹಣ್ಣಿನಲ್ಲಿ ಅನೇಕ ಬಗೆಯ ಪೋಷಕಾಂಶಗಳು ಇರುತ್ತದೆ. ಆರೋಗ್ಯದ ಜೊತೆಗೆ ಮುಖದ ಕಲೆಯನ್ನೂ ಹೋಗಲಾಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹಣ್ಣಿನ ಬದಲು ಹಸಿ ಪಪ್ಪಾಯ ಎಂದಾದರೂ ಸೇವಿಸಿದ್ದೀರಾ…? ಅದರಲ್ಲಿ ಇನ್ನೂ ಅಗರ್ಭವಾದ ಪೋಷಕಾಂಶಗಳು ಲಭಿಸುತ್ತದೆ.
ಪೋಷಕಾಂಶಗಳ ವಿಷಯದಲ್ಲಿ ಶ್ರೀಮಂತವಾಗಿರುವ ಹಸಿ ಪಪ್ಪಾಯ ಆರೋಗ್ಯಕ್ಕೆ ವರದಾನವೆಂದೇ ಹೇಳಬಹುದು. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುವುದರಿಂದ ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.
ಹಸಿ ಪಪ್ಪಾಯದಲ್ಲೂ ಕ್ಯಾಲೋರಿ ಅಂಶ ಕಡಿಮೆಯಿದ್ದು ಫೈಬರ್ ಪ್ರಮಾಣ ಹೆಚ್ಚಿರುತ್ತದೆ. ಇದು ಅಲ್ಲದೆ ಕೊಬ್ಬನ್ನು ವಿಭಜಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಹಸಿ ಪಪ್ಪಾಯವನ್ನು ಪದಾರ್ಥದಲ್ಲಿ ಅಥವಾ ನೇರವಾಗಿ ಹಸಿಯಾಗಿ ಸೇವಿಸಿದರೂ ಒಳ್ಳೆಯದು.