ಕ್ಯಾರೆಟ್ ನಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೊಡುವಂತಹ ತರಕಾರಿ ಯಾಗಿದೆ. ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಸೂಪ್, ಕ್ಯಾರೆಟ್ ಪಲ್ಯ, ಕ್ಯಾರೆಟ್ ಪಾಯಸ ಹೀಗೆ ಹಲವಾರು ವಿಧಗಳಲ್ಲಿ ನಾವು ಕ್ಯಾರೆಟ್ ಸೇವನೆಯ ಬಗ್ಗೆ ಆಲೋಚನೆ ಮಾಡಬಹುದು.
ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
• ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು ಅದು ಅತ್ಯಾವಶ್ಯಕ.
• ಕ್ಯಾರೆಟಿನಲ್ಲಿ ಥೈಮಿನ್, ನಿಯಾಸಿನ್ ಮತ್ತು ವಿಟಮಿನ್ ಬಿ6 ಇದೆ.
• ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ದೃಷ್ಟಿಗೆ ಒಳ್ಳೆಯದು
ಕ್ಯಾರೆಟ್ ವಿಟಮಿನ್ ಎ ಯ ಆಗರ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು. ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಇರುಳುಗಣ್ಣು ಸೇರಿದಂತೆ ದೃಷ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ದೂರವಿರಬಹುದು ಮಾತ್ರವಲ್ಲ, ಅದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
2. ಅಕ್ಷಿಪಟಲದ ಸಮಸ್ಯೆ ನಿವಾರಣೆ
ನಿತ್ಯವೂ ಕ್ಯಾರೆಟ್ ತಿನ್ನುವುದರಿಂದ ಮಕ್ಕಳಲ್ಲಿ ಅಕ್ಷಿಪಟಲದ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾರೆಟ್‍ನಲ್ಲಿರುವ ಬೀಟಾ ಕೆರೊಟಿನ್ ದೃಷ್ಟಿಯನ್ನು ಉತ್ತಮ ಹಾಗೂ ತೀಕ್ಷ್ಣಗೊಳಿಸಲು ಸಹಕಾರಿ.
3. ಆರೋಗ್ಯಕರ ಚರ್ಮ
ಕ್ಯಾರೆಟ್‍ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ.
4. ಜೀರ್ಣಕ್ರೀಯೆಯನ್ನು ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ
ಕ್ಯಾರೆಟ್‍ನಲ್ಲಿರುವ ಅಧಿಕ ಡಯೆಟರಿ ಫೈಬರ್, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ, ಮಲಬದ್ಧತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
5. ಅತಿಸಾರವನ್ನು ಗುಣಪಡಿಸುತ್ತದೆ
ಮಕ್ಕಳಲ್ಲಿನ ಅತಿಸಾರವನ್ನು ಕ್ಯಾರೆಟ್ ಬಹುಬೇಗನೆ ಮತ್ತು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಅದಕ್ಕಾಗಿ, ದಿನಕ್ಕೆ ಹಲವು ಬಾರಿ ಕ್ಯಾರೆಟ್ ಸೂಪ್ ಅಥವಾ ಜ್ಯೂಸ್ ಕುಡಿಯಿರಿ.