ಚಿತ್ರದುರ್ಗ : ಮಯೂರ್ ಇಂಟರ್ನ್ಯಾಷನಲ್ ಸ್ಕೂಲ್ ಮಾಲೀಕರು ಹಾಗೂ ಆದಿಶಕ್ತಿ ಎಲೆಕ್ಟ್ರಿಕಲ್ಸ್ನ ಮೈಲಾರಸ್ವಾಮಿ ಇವರ ಸಮಾಜ ಸೇವೆಯನ್ನು ಗುರುತಿಸಿ
ಭಾರತ ಸರ್ಕಾರದ ಮಾನ್ಯತೆಯುಳ್ಳ ಎಮರ್ಜಿಂಗ್ ಅಚೀವರ್ಸ್ ಅವಾರ್ಡ್ ಕೌನ್ಸಿಲ್ ವತಿಯಿಂದ ದೆಹಲಿಯಲ್ಲಿ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಚಳ್ಳಕೆರೆ ರಸ್ತೆಯಲ್ಲಿರುವ ಆದಿಶಕ್ತಿ ಎಲೆಕ್ಟ್ರಿಕಲ್ಸ್ನಲ್ಲಿ ಚಿತ್ರದುರ್ಗ ವಿದ್ಯುತ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜಿ.ಹಚ್.ಸಿಖಂದರ್, ಹರೀಶ್, ದಿನೇಶ್, ಇಮ್ತಿಯಾಜ್, ರಂಗಸ್ವಾಮಿ, ಟಿಪ್ಪು, ಹುಸೇನ್, ಶ್ರೀಧರ್, ಜಯಣ್ಣ ಇವರುಗಳು ಮೈಲಾರಸ್ವಾಮಿಯನ್ನು ಸನ್ಮಾನಿಸಿದರು.