ವಾಷಿಂಗ್ಟನ್ : ಉಕ್ರೇನ್-ರಷ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲಾಸ್ಕದಲ್ಲಿ ನಡೆಸಿದ ಸಭೆಯು ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಮುಕ್ತಾಯಗೊಂಡಿದೆ.
ಉಭಯ ನಾಯಕರ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ಕೇವಲ 12 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್ , ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.