ಚಿತ್ರದುರ್ಗ: ಕಾಂಗ್ರೆಸ್ ಪಕ್ಷದಲ್ಲಿನ ವಿವಿಧ ಸಮಿತಿಗಳು ಸಕ್ರಿಯವಾಗಿ ಕಾರ್ಯವನ್ನು ನಿರ್ವಹಿಸಬೇಕಿದೆ ಬರೀ ಲೆಟರ್ ಹೆಡ್ ಸಮಿತಿಗಳಾಗಬೇಡಿ ಎಂದು ವಿವಿಧ ಸಮಿತಿಯ ಸದಸ್ಯರಿಗೆ ರಾಜ್ಯಸಭೆಯ ಮಾಜಿ ಸದಸ್ಯರು, ಹಿರಿಯ ಗಾಂಧಿವಾದಿಗಳಾದ ಹೆಚ್.ಹನುಮಂತಪ್ಪ ಕಿವಿ ಮಾತು ಹೇಳಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಕಾನೂನು ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದವತಿಯಿಂದ ಹಮ್ಮಿಕೊಂಡಿದ್ದ 75ನೇ ವರ್ಷದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಪಕ್ಷಕ್ಕೆ ಬಂದವರೆಲ್ಲರಿಗೂ ಶೀಘ್ರವಾಗಿ ಅಧಿಕಾರ ಸಿಗಬೇಕಿದೆ ಬೇಗ ಎಲ್ಲ ರೀತಿಯ ಸೌಲಭ್ಯವನ್ನು ಅನುಭವಿಸಬೇಕಿದೆ ಇಲ್ಲಿ ಯಾರು ಸಹಾ ಕುರ್ಚಿ, ಹಾಕಲು ಪಕ್ಷದ ಭಾವುಟ ಕಟ್ಟಲು ಸಮಯ ಇಲ್ಲ, ಚುನಾವಣೆ ಬಂದರೆ ಪಕ್ಷದವತಿಯಿಂದ ಟೀಕೇಟ್ ಸಿಗಬೇಕಿದೆ, ಆಗ ಮಾತ್ರ ಪಕ್ಷ ಚನ್ನಾಗಿದೆ ಎನ್ನುತ್ತಾರೆ ಪಕ್ಷದ ಇಂತಹ ಕಾರ್ಯಕ್ರಮಗಳಲ್ಲಿ ಜನರಿರುವುದಿಲ್ಲ ಅದೇ ನಾಲ್ಕು ಜನರನ್ನು ಮಾತ್ರ ನೋಡಬೇಕಿದೆ. ಎಂದು ಸಮಿತಿಗಳ ಪದಾಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಎಂದರೆ ಎಲ್ಲರಿಗೂ ಸಹಾ ಗೌರವವನ್ನು ತಂದು ಕೂಡುವ ಪಕ್ಷವಾಗಿತ್ತು, ಇಂದಿಗೂ ಸಹಾ ಪಕ್ಷ ಆ ಗೌರವವನ್ನು ಉಳಿಸಿಕೊಂಡು ಬಂದಿದೆ, ಆದರೆ ಪಕ್ಷದಲ್ಲಿ ಇರುವವರು ಈ ಗೌರವವನ್ನು ಉಳಿಸಿಕೊಳ್ಳುತ್ತಿಲ್ಲ, ಪಕ್ಷದ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳಾಗುವವರು ಅದರ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಬರೀ ಲೆಟರ್ಹೆಡ್ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಹೊರೆತು ಪಕ್ಷದ ಬಗ್ಗೆ ಕಾಳಜಿಯನ್ನು ತೋರಿಸುತ್ತಿಲ್ಲ ಪಕ್ಷದ ಕೆಲಸವನ್ನು ಮಾಡದಂತ ಸಮಿತಿಗಳನ್ನು ರದ್ದು ಮಾಡಿ ಬೇರೆಯವರನ್ನು ನೇಮಕ ಮಾಡುವಂತೆ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಪಕ್ಷದದಲ್ಲಿ ಈ ರೀತಿಯಾದ ಕಾರ್ಯಕ್ರಮ ಮಾಡಿದೆ ಜನವೇ ಇರುವುದಿಲ್ಲ ಅದೇ ಪಕ್ಷದ ನಾಲ್ಕಾರು ಜನ ಮಾತ್ರ ಇರುತ್ತಾರೆ ಇದರ ಬಗ್ಗೆ ಪತ್ರಿಕೆಯಲ್ಲಿ ನೋಡುತ್ತೇನೆ, ಯಾವುದೇ ಒಂದು ಕಾರ್ಯಕ್ರಮ ಂಆಡಿದೆ ಅದರೆ ಸಮಿತಿಯವರು ಪೂರ್ಣ ಪ್ರಮಾಣಧ ಜವಾಬ್ದಾರಿಯನ್ನು ತೆಗೆದುಕೊಂಡು ಜನರನ್ನು ಸೇರಿಸುವ ಕಾರ್ಯವನ್ನು ಮಾಡಬೇಕಿದೆ. ನಮ್ಮಲ್ಲಿ ಸುಮಾರು ಸಮಿತಿಗಳಿದ್ದರು ಸಹಾ ಇಂತಹ ಕಾರ್ಯಕ್ರಮಗಳಿಗೆ ಬರುವವರ ಸಂಖ್ಯೆ ಕಡಿಮೆ ಇದೆ ಎಂದು ಹನುಮಂತಪ್ಪ ವಿಷಾಧಿಸಿದರು.