ಚಿತ್ರದುರ್ಗ: ಡಾ ಬಿ ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಪೂರ್ವಗ್ರಹಪೀಡಿತರಾಗಿ ಓದೆದೆ ಸುಧೀರ್ಘ ಅಧ್ಯಯನ ಮಾಡಿದರೆ ಅವರ ಅತ್ಯುನ್ನತ ಆದರ್ಶಗಳು ನಮಗೆ ಗೋಚರವಾಗುತ್ತವೆ ಎಂದು ಚಿತ್ರದುರ್ಗ ಸಾಹಿತಿ ಡಾ ಲೋಕೇಶ ಅಗಸನಕಟ್ಟೆ ತಿಳಿಸಿದರು
ಚಿತ್ರದುರ್ಗ ನಗರದ ಸರ್ಕಾರಿ ನೌಕರ ಭವನದಲ್ಲಿ ಶುಕ್ರವಾರ ಚಿತ್ರದುರ್ಗ ನಗರದ ಕಟ್ಟೆಗೆಳೆಯರ ಬಳಗ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಡಾ ಕಲಮರಹಳ್ಳಿ ಮಲ್ಲಿಕಾರ್ಜುನ ಅವರ ಸಂಶೋಧನಾ ಗ್ರಂಥ ಕಾಡುಗೊಲ್ಲ ಬುಡಕಟ್ಟು ಕುಲ ಕಥನ ಮತ್ತು ಡಾ ಬಿ ಎಂ ಗುರುನಾಥ್ ಅವರ ಕವನಸಂಕಲನ ನಕ್ಷತ್ರ ತಬ್ಬಿ ಮಲಗಿದ ಹೊತ್ತು ಪುಸ್ತಕಗಳ ಕುರಿತು ಅಭಿನಂದನಾ ಸಮಾರಂಭದಲ್ಲಿ ಕವನ ಸಂಕಲನ ಕುರಿತು ಮಾತನಾಡಿ ಡಾ ಬಿ ಎಂ ಗುರುನಾಥ್ ಅವರ ಸೂಕ್ಷö್ಮ ಸಂವೇದನೆ, ತನ್ನ ಅಂತರಾತ್ಮದ ಅಭಿಪ್ರಾಯಗಳನ್ನು ಅತ್ಯಂತ ಸ್ಪುಟವಾಗಿ ಚಿತ್ರಿಸಿದ್ದಾರೆ
ತಮ್ಮ ಬದುಕು ಬವಣೆ ತನ್ನ ಸುತ್ತಲಿನ ಸಾಮಾಜಿಕ ಸ್ಥಿತಿಗತಿಗಳನ್ನು ಕವನದ ಮೂಲಕ ಬರೆದಿದ್ದಾರೆ ಒಬ್ಬ ಕವಿಗೆ ಇರಬೇಕಾದ ಸೂಕ್ಷö್ಮತೆಯನ್ನು ಇಲ್ಲಿ ಚಿತ್ರಿದಸಿದ್ದಾರೆ ಎಂದರು
ಲೇಖಕ ಡಾ ಕಲಮರಹಳ್ಳಿ ಮಲ್ಲಿಕಾರ್ಜುನ ಅವರ ಸಂಶೋಧನಾ ಗ್ರಂಥ ಕಾಡುಗೊಲ್ಲ ಬುಡಕಟ್ಟು ಕುಲ ಕಥನ ಪುಸ್ತಕ ಕುರಿತು ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ ಬುಡಕಟ್ಟು ಸಮುದಾಯದವರ ಸಾಮಾಜಿಕ, ಶೈಕ್ಷಣಿಕ, ಪೌರಾಣಿಕ, ನೈತಿಕ ಹಾಗೂ ತಮ್ಮ ನೆಲಮೂಲ ಸಂಸ್ಕೃತಿಯನ್ನು ಈ ಕೃತಿ ನಮಗೆ ಪರಿಚಯಿಸುತ್ತದೆ.
ಸಾಮಾನ್ಯವಾಗಿ ಮಲೆಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಯತ್ತಪ್ಪ, ಈರಣ್ಣ ಕರಡಿಬುಳ್ಳಪ್ಪ ಈ ಎಲ್ಲಾ ಸಾಂಸ್ಕೃತಿಕ ವೀರರ ಸಮಾಜೋಪಯೋಗಿ ಕಾರ್ಯಗಳು ಮತ್ತು ಅವರ ಮಾದರಿಯಾದಂತಹ ಜೀವನ ಕ್ರಮದ ಹಿನ್ನೆಲೆ ಇಂದು ಬುಡಕಟ್ಟು ಜನಾಂಗವಾದ ಕಾಡುಗೊಲ್ಲರು ಇಂದಿಗೂ ತಮ್ಮ ಹಟ್ಟಿಗಳಲ್ಲಿ ತಮ್ಮ ಪೌರಾಣಿಕ ಇತಿಹಾಸದ ಜೀವನ ಕ್ರಮವನ್ನು ರೂಢಿಸಿಕೊಂಡು ತಮ್ಮ ಆದ ವಿಶಿಷ್ಟ ಬದುಕನ್ನು ಸಾಗಿಸುವುದನ್ನು ತುಂಬಾ ಸೂಕ್ಷö್ಮವಾಗಿ ಲೇಖಕರು ನಮಗೆ ತಿಳಿಸಿದ್ದಾರೆ
ಶಿಷ್ಟ ಮತ್ತು ಬುಡಕಟ್ಟು ಬದುಕಿನ ರೀತಿಯನ್ನು ಈ ಕೃತಿಯಲ್ಲಿ ಕಾಣಬಹುದು ಇಂದಿಗೂ ಗೊಲ್ಲರು ತಮ್ಮ ಕುಲದಲ್ಲಿ ಹಸು, ಕರು, ಕುಲ ದೇವರು, ಮನೆದೇವರುಗಳ ಜತೆಗೆ ತಮ್ಮ ಸಾಂಸ್ಕೃತಿಕ ವೀರರನ್ನೇ ದೇವರುಗಳೆಂದು ಪೂಜಿಸುವ ಕ್ರಮವಿದೆ ಇಂದಿಗೂ ಕೂಡ ಇತರೆ ಸಮುದಾಯದವರ ಜತೆಗೆ ಬೆರೆಯದೇ ತಮ್ಮ ಹಟ್ಟಿಯಲ್ಲಿ ಕಳ್ಳೆಗುಡಿ ಕಟ್ಟಿಕೊಂಡು ಪ್ರತ್ಯೇಕವಾಗಿ ವಾಸಿಸುವುದನ್ನು ಕಾಣಬಹುದು ಎಂದರು
ಚಿತ್ರದುರ್ಗ ನಗರದ ಕಟ್ಟೇಗೆಳೆಯರ ಬಳಗದ ಪದಾಧಿಕಾರಿ ಈ ಸಂಪತ್ಕುಮಾರ್ ಪ್ರಾಸ್ತಾವಿಕ ಮಾತನಾಡಿ ನಗರದ ಸಮಾನ ಮನಸ್ಕರು ಸೇರಿಕೊಂಡು ಕಟ್ಟೇಗೆಳೆಯರ ಬಳಗ ರಚಿಸಿಕೊಂಡಿದ್ದೇವೆ ಈ ಬಳಗದ ಉದ್ದೇಶ ನಮ್ಮ ಸುತ್ತಲಿನ ಸಾಹಿತ್ಯ ಸಂಸ್ಕೃತಿ, ಇತಿಹಾಸ, ವಿವಿಧ ಸಮುದಾಯಗಳ ಉದಯೋನ್ಮುಖ ಪ್ರತಿಭೆಗಳನ್ನು ಹೊರಗೆಳೆದು ಪ್ರೋತ್ಸಾಹಿಸುವುದೇ ಈ ಬಳಗದ ಗುರಿ ಎಂದರು
ಇAದಿನ ಆಧುನಿಕ ಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಚರ್ಚಿಸಿ ಸದಾ ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡುವುದು ಮತ್ತು ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದರು
ಇದೇ ವೇಳೆ ಕಟ್ಟೆಗೆಳೆಯರ ಬಳಗವೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಕೃತಿಕಾರರನ್ನು ಗೌರವಿಸಿದರು ವೇದಿಕೆಯಲ್ಲಿ ಸಾಹಿತ್ಯಾಸಕ್ತರು ವಿದ್ಯಾರ್ಥಿ ಯುವಕರು ಬಹುಮಾನ ಪಡೆದ ಕೃತಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
ನಗರದ ಕಟ್ಟೆಗೆಳೆಯರ ಬಳಗದ ಪದಾಧಿಕಾರಿಗಳಾದ ಈ ಸಂಪತ್ಕುಮಾರ, ಸಿ ಎಚ್ ರೇವಣ್ಣ, ಮಂಜುನಾಥ, ಶಿವಣ್ಣ, ಸಾಯಿ ಪ್ರಸಾದ್, ಸಂತೋಷ್, ರಾಘವೇಂದ್ರ, ರವಿಶಂಕರ್, ಪಿ ಎಂ ಗುರುನಾಥ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸಿ ಟಿ ವೀರೇಶ, ಉಪ್ಪಾರಹಟ್ಟಿ ಕೆ ಚಿತ್ತಯ್ಯ, ರಾಜಣ್ಣ, ಜಿ ಬಿ ಮಹಾಂತೇಶ, ವಿರೂಪಾಕ್ಷಪ್ಪ, ಪಿಆರ್ಪುರ ಚಿತ್ತಯ್ಯ, ಚಿತ್ರದುರ್ಗ ಚಿತ್ತಯ್ಯ, ವಿವಿಧ ತಾಲೂಕುಗಳ ಸಾಹಿತ್ಯಾಸಕ್ತರು ಪ್ರಾಧ್ಯಾಪಕರು ಶಿಕ್ಷಕರು ಸಾಹಿತಿಗಳು ನಾಗರೀಕರು ಇದ್ದರು
































