ಹಿರಿಯೂರು : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜ್ಞಾಪಕ ಶಕ್ತಿಯಲ್ಲಿ ವಿಶ್ವ ದಾಖಲೆ ಪಡೆದಿರುವ (ವರ್ಲ್ಡ್ ರೆಕಾರ್ಡ್ ಹೋಲ್ಡರ್) ಸ್ಮರಣ ಶಕ್ತಿ ತರಬೇತುದಾರ ಡಾ. ರವಿಪ್ರಸಾದ್ ಸಜ್ಜನ್.ಎಂ ರವರಿಗೆ “ವೈದ್ಯ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಡಾ. ರವಿಪ್ರಸಾದ್ ಸಜ್ಜನ್.ಎಂ. ರವರು ಅಂತರಾಷ್ಟಿçÃಯ ಮಟ್ಟದಲ್ಲಿ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ, ಅಪ್ರತಿಮ ಸಾಧನೆ ಮತ್ತು ಅದ್ವಿತೀಯ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಡಾ. ರವಿಪ್ರಸಾದ್ ಸಜ್ಜನ್. ಎಂ. ರವರು ಹಿರಿಯೂರಿನವರಾಗಿದ್ದು, ಕೃಷಿ ವಿಜ್ಞಾನಿ ಡಾ. ಬಿ. ಮಹಂತೇಶ್ ಮತ್ತು ಶ್ರೀಮತಿ ಸರಸ್ವತಿ ಇವರ ಪುತ್ರರಾಗಿದ್ದಾರೆ.
ಶಿಕ್ಷಣ ತಜ್ಞರೂ ಆಗಿರುವ ಇವರು ಭಾರತ ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಜೊತೆಗೆ ಸಿಂಗಾಪೂರ, ಬ್ಯಾಂಕಾಕ್, ಮಲೇಶಿಯಾ ಹೀಗೆ ವಿಶ್ವದಾದ್ಯಂತ ಸ್ಮರಣ ಶಕ್ತಿ ತರಬೇತುದಾರರಾಗಿ ತರಬೇತಿಗಳನ್ನು ಕೊಡುತ್ತಿದ್ದಾರೆ. ಇವರು ಇದುವರೆಗೆ ವಿದ್ಯಾರ್ಥಿಗಳು, ವೃತ್ತಿಪರರು, ವೈದ್ಯರು, ವ್ಯಾಪಾರ ಮುಂದಾಳುಗಳು, ಶಿಕ್ಷಕರೂ ಸೇರಿದಂತೆ ಸುಮಾರು 4 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ತರಬೇತಿ ನೀಡಿದ್ದಾರೆ.
ಇವರು ಸ್ಮರಣ ಶಕ್ತಿಯ ಕ್ಷೇತ್ರದಲ್ಲಿ ತನ್ನ ಹೆಸರಿನಲ್ಲಿ ಹಲವು ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಇವರಿಂದ ತರಬೇತಿ ಪಡೆದಿರುವ ಹಲವು ವಿದ್ಯಾರ್ಥಿಗಳು ವಿಶ್ವದಾಖಲೆ ಮಾಡಿದ್ದಾರೆ.
ಡಾ. ರವಿಪ್ರಸಾದ್ ಸಜ್ಜನ್.ಎಂ. ರವರು ಇದುವರೆಗೆ ಸಲ್ಲಿಸಿರುವ ಸೇವೆಯನ್ನು ಅತ್ಯುತ್ತಮ ಸೇವೆಯೆಂದು ಪರಿಗಣಿಸಿ ಶ್ರೀಯುತರಿಗೆ ಇದುವರೆಗೆ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ, ರೋಟರಿ ಕ್ಲಬ್ ಮೆಚ್ಚುಗೆ ಅಂತರಾಷ್ಟಿçÃಯ ಪ್ರಶಸ್ತಿ, ಅತ್ಯುತ್ತಮ ಸಂಶೋಧನಾ ವಿದ್ವಾಂಸ ಪ್ರಶಸ್ತಿ, ಭಾರತ ರತ್ನ ಡಾ. ರಾಧಾಕೃಷ್ಣನ್ ಚಿನ್ನದ ಪದಕ ಪ್ರಶಸ್ತಿ, ಹಾಲ್ ಆಫ್ ಫೇಮ್ ಉದಯೋನ್ಮುಖ ಸಂಶೋಧಕ ಪ್ರಶಸ್ತಿ, ಐದನೇ ಶೈಕ್ಷಣಿಕ ಸಾಧನೆ ಪ್ರಶಸ್ತಿ (ಯುವ ವಿಜ್ಞಾನಿ ವಿಭಾಗ), ಅಂತರಾಷ್ಟಿçÃಯ ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ (ಮೌಖಿಕ), ಬ್ಲೂ ಪ್ಲಾನೆಟ್ ಸ್ಕಾಲರ್ ಪ್ರಶಸ್ತಿ-ಮಾನವ ಕಲ್ಯಾಣಕ್ಕಾಗಿ ನವೀನ ಸಂಶೋಧನೆ ಪ್ರಶಸ್ತಿ, ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ, ಆದರ್ಶ ವಿದ್ಯಾ ಸರಸ್ವತಿ ರಾಷ್ಟಿçÃಯ ಪುರಸ್ಕಾರ, ಯುವ ಸಂಶೋಧಕ ಪ್ರಶಸ್ತಿ, ಅತ್ಯುತ್ತಮ ಸ್ನಾತಕೋತ್ತರ ಪದವಿ ಡಾಕ್ಟರಲ್ ಪ್ರಬಂಧ ಪ್ರಶಸ್ತಿ, ಅತ್ಯುತ್ತಮ ಮನಸ್ಸಿನ ತರಬೇತುದಾರ ಮತ್ತು ಸ್ಮರಣ ಶಕ್ತಿ ತರಬೇತುದಾರ ಪ್ರಶಸ್ತಿ, ಬಾಲಿವುಡ್ ನಟಿ ಅಮೃತಾರಾವ್ ರವರಿಂದ “ಬ್ಲೆöÊಂಡ್‌ವಿAಕ್ಸ್”-ಇAಡಿಯಾ ಐಕಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರತಿಷ್ಠಿತ ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಹೊಳಲ್ಕೆರೆಯ ಸಂವಿಧಾನ ಸೌಧದಲ್ಲಿ ಸಾಣೆಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.