ಕಲಬುರಗಿ: ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಮಠದ ಎಂಟನೇ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪಾ (92) ಲಿಂಗೈಕ್ಯರಾಗಿದ್ದಾರೆ.
ಡಾ. ಶರಣಬಸಪ್ಪ ಅಪ್ಪಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶರಣಬಸವೇಶ್ವರ ಸಂಸ್ಥಾನ ಮಠದಲ್ಲಿ ದಾಸೋಹ ಮಹಾಮನೆಯಲ್ಲಿ ಡಾ. ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಲಬುರಗಿಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಹೆಸರು ವಾಸಿಯಾಗಿದ್ದರು. ಲಕ್ಷಾಂತರ ಭಕ್ತರನ್ನು ಅವರು ಅಗಲಿದ್ದಾರೆ.