ಹೊಳಲ್ಕೆರೆ : ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಭಾರತದ ದೇಶದಲ್ಲಿ ವಿಭಿನ್ನ ಸಂಸ್ಕøತಿ, ಸಂಪ್ರದಾಯ, ಆಚರಣೆಯಿದ್ದರೂ ಅವುಗಳ ಹಿಂದೆ ಗಾಢವಾದ ನಂಬಿಕೆಯಿದೆ. ಹನ್ನೆರಡನೆ ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರ ಸಂದೇಶ ಪ್ರಪಂಚದೆಲ್ಲೆಡೆ ಪಸರಿಸಿದೆ. ಯಾರೋ ಕೊಟ್ಟಿದ್ದನ್ನು ಮತ್ತೊಬ್ಬರಿಗೆ ದಾನ ಮಾಡುವುದು ದಾನವಲ್ಲ. ಸ್ವಂತ ಶ್ರಮಪಟ್ಟು ದುಡಿದು ಕಷ್ಟದಲ್ಲಿರುವವರಿಗೆ ದಾನ ಮಾಡುವುದಿದೆಯಲ್ಲಾ ಅದುವೇ ನಿಜವಾದ ದಾನ ಎಂದು ಹೇಳಿದರು.
ಅವರು ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಬನಶಂಕರಿ ಅಮ್ಮನವರ 25 ನೇ ವರ್ಷದ ರಜತ ಮಹೋತ್ಸವ ಹಾಗೂ ಬನಶಂಕರಿ ಸಮುದಾಯ ಭವನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ , ಗಾಳಿ, ನೀರು, ಬೆಳಕು, ಅನ್ನ, ಆಹಾರ ನೀಡಿರುವ ದೇವರನ್ನು ಸ್ಮರಿಸಬೇಕೆಂದು ದೇವರ ದಾಸಿಮಯ್ಯ ಹೇಳಿದ್ದಾರೆ. ಜಗತ್ತಿನಾದ್ಯಂತ ಶರಣರ ವಚನ ಸಾಹಿತ್ಯಗಳು ಪ್ರಚಾರವಾಗಬೇಕೆಂಬುದು ಅವರ ಆಶಯವಾಗಿತ್ತು. ಕಿತ್ತೂರರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ದ ಹೋರಾಡಿದ ಪ್ರಥಮ ರಾಣಿ ಎಂದು ಸ್ಮರಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಗುಣಮಟ್ಟದಿಂದ ನಿರ್ಮಾಣಗೊಂಡಿರುವ ಸಮುದಾಯ ಭವನ ಕೇವಲ ದೇವಾಂಗ ಜನಾಂಗಕ್ಕೆ ಸೇರಿದ್ದಲ್ಲ. ಎಲ್ಲಾ ಜಾತಿಯವರ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದರು. ಸಮುದಾಯ ಭವನಕ್ಕೆ ಅನೇಕ ದಾನಿಗಳು ನೆರವು ನೀಡಿದ್ದಾರೆ. ನಾರಾಯಣ ಎಂಬುವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಿರುವ ದೇಶದ ಪ್ರಧಾನಿ ನರೇಂದ್ರಮೋದಿರವರು ಈ ಜನಾಂಗಕ್ಕೆ ಗೌರವ ತಂದು ಕೊಟ್ಟಿರುವುದು ನಿಮ್ಮೆಲ್ಲರ ಭಾಗ್ಯ. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಲ್ಲಿ ರೈತರು, ಬಡವರ ಬಗ್ಗೆ ಕಾಳಜಿಯಿರುವುದರಿಂದ ಭರಮಸಾಗರ ಹೋಬಳಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಬರಲು ಸಾಧ್ಯವಾಯಿತು. ರೈತರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡಿದ್ದಾರೆ. ಇನ್ನು ಎರಡು ಮೂರು ತಿಂಗಳಲ್ಲಿ 37 ಕೆರೆಗಳಿಗೆ ಭದ್ರ ಯೋಜನೆಯಿಂದ ನೀರು ಹರಿಯಲಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ಕಡಿಮೆಗೊಳಿಸಿರುವುದರಿಂದ ಬಡ ರೈತರು ಕಾರು ಖರೀಧಿಸಬಹುದು. ಅಡಿಕೆಗೆ ಒಳ್ಳೆಯ ದರವಿದೆ. ಹಾಗೂ ಅಡಿಕೆ ತೋಟಗಳನ್ನು ಮಾಡಿಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ರೈತರಲ್ಲಿ ಮನವಿ ಮಾಡಿದರು.
ಹಂಪಿ ಹೇಮಕೂಟ ಗಾಯತ್ರಿ ಪೀಠದ ಸಂಸ್ಥಾಪನಾದೀಶರಾದ ದಯಾನಂದಪುರಿ ಮಹಾಸ್ವಾಮೀಜಿ ಮಾತನಾಡಿ 25 ವರ್ಷಗಳ ಹಿಂದೆ ಕಟ್ಟಿರುವ ಈ ದೇವಸ್ಥಾನಕ್ಕೆ ಅಪಾರ ಭಕ್ತರಿದ್ದಾರೆ. ಸಾಮಾಜಿಕವಾಗಿ ಚಿಂತಿಸುವವರ ಸಂಖ್ಯೆ ಕಡಿಮೆಯಾಗಿದೆ. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶರಣರ ವಚನಗಳಿಗೆ ಆಧುನಿಕತೆಯ ಮೆರಗು ಕೊಟ್ಟ ಸಂತ. ಪ್ರಗತಿಪರವಾಗಿ ಚಿಂತಿಸುವವರು ವಿರಳವಾಗಿದ್ದಾರೆ. ಆದರ್ಶ ಸಮಾಜ ನಿರ್ಮಾಣವಾಗಬೇಕೆಂಬುದು ದೇವರ ದಾಸಿಮಯ್ಯನವರ ಕಲ್ಪನೆಯಾಗಿತ್ತೆಂದು ಹೇಳಿದರು.
ದೇವಾಂಗ ಸಮಾಜದ ಅಧ್ಯಕ್ಷ ಆರ್.ಎ.ಅಶೋಕ್, ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಂ.ಡಿ.
ಲಕ್ಷ್ಮಿನಾರಾಯಣ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸುಮಿತ್ರಕ್ಕ, ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಗೋ.ತಿಪ್ಪೇಶ್, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ, ಡಿ.ಸಿ.ಮೋಹನ್, ಬಿ.ಪುಟ್ಟಸ್ವಾಮಿ, ಪಿ.ಎಸ್.ಮೂರ್ತಿ, ಶಿವಕುಮಾರ್, ಶ್ರೀನಿವಾಸಶಾಸ್ತ್ರಿ, ಲೋಕೇಶ್, ಸುರೇಶ್, ರಾಜು ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.






























