ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ತೀವ್ರವಾಗಿ ಮನನೊಂದ ಚಾಲಕನೊಬ್ಬ ಬಸ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಾಲಚಂದ್ರ ಹೂಕೋಜಿ ಆತ್ಮಹತ್ಯೆ ಶರಣಾಗಿರುವ ಬಸ್ ಚಾಲಕ.
ಬೆಳಗಾವಿ ಸಿಬಿಟಿ ಬಸ್ ನಲ್ಲಿಯೇ ಚಾಲಕ ನೇಣಿಗೆ ಕೊರಳೊಡ್ಡಿದ್ದಾರೆ. ಬಾಲಚಂದ್ರ ಹೂಕೋಜಿ ಹಲವು ದಿನಗಳಿಂದ ರಜೆ ಕೇಳುತ್ತಿದ್ದರಂತೆ ಆದರೆ ಹಿರಿಯ ಅಧಿಕಾರಿಗಳು ರಜೆ ನೀಡಿರಲಿಲ್ಲವಂತೆ. ಈಗ ತನ್ನ ಅಕ್ಕನ ಮಗಳ ಮದುವೆ ಇದೆ. ಅದಕ್ಕಾಗಿ ರಜೆ ಬೇಕು ಎಂದು ಕೇಳಿದ್ದರಂತೆ ಆದಾಗ್ಯೂ ರಜೆ ನೀಡಿಲ್ಲ. ಇದರಿಂದ ಬೇಸರಗೊಂದ ಬಾಲಚಂದ್ರ ಬಸ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.