ಚಿತ್ರದುರ್ಗ : ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ 19 ವರ್ಷದೊಳಗಿನ ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಿಂದ ಭಾಗವಹಿಸಿದ್ದ ಚಿತ್ರದುರ್ಗದ ಕೆ.ಕೆ.ನ್ಯಾಷನಲ್ ಸ್ಕೂಲ್ನ ಹತ್ತನೆ ತರಗತಿ ವಿದ್ಯಾರ್ಥಿ ಪುರುಷೋತ್ತಮ್ ಹೆಚ್.ಎಂ. ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಚಿತ್ರದುರ್ಗದ ಜಾನಪದ ಹಾಡುಗಾರ ಹರೀಶ್ ಎಂ.ಕೆ. ಭಾರತಮ್ಮ ದಂಪತಿಗಳ ಪುತ್ರ ಪುರುಷೋತ್ತಮ್ ಹೆಚ್.ಎಂ. ಬಾಲ್ಯದಿಂದಲೂ ಕ್ರಿಕೆಟ್ನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರಿಂದ ವಿವಿಧ ಹಂತಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಕರ್ನಾಟಕ ತಂಡದ ಕೋಚ್ ಚಿನ್ನಯ್ಯ ಮಾರ್ಗದರ್ಶನದಂತೆ ರಾಷ್ಟ್ರ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಬೆಂಗಳೂರಿನ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.