ದಾವಣಗೆರೆ: ದಾವಣಗೆರೆ ನಗರದ ಡಿಸಿಎಂ ಬಡಾವಣೆ ಬಸ್‍ಸ್ಟಾಪ್ ಎದುರು ಇರುವ ಡಿವಿಎಸ್ ಪದವಿ ಪೂರ್ವ ಕಾಲೇಜು ಮತ್ತು ಸಮರ್ಥ ಮೆಡಿಕಲ್ ಅಕಾಡೆಮಿಗೆ ಇಲಾಖೆಯಿಂದ ಮಾನ್ಯತೆ ನೀಡಿರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕರಿಸಿದ್ದಪ್ಪ ತಿಳಿಸಿದ್ದಾರೆ.
ಈ ಸಂಸ್ಥೆಗೆ ಇಲಾಖೆಯಿಂದ ಮಾನ್ಯತೆ ನೀಡದಿದ್ದರೂ ಸಹ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಈ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿರುವ ಪೋಷಕರು ವಿದ್ಯಾರ್ಥಿಗಳನ್ನು ದಾಖಲು ಮಾಡಬಾರದೆಂದು ತಿಳಿಸಿ ಈಗಾಗಲೇ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.