ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಕರ್ನಾಟಕ ಬ್ಯಾಂಕ್ ಒಂದಾಗಿದ್ದು ಇದೀಗ ಇಲ್ಲಿ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ ಮಾಡಿದೆ. ಆನ್ಲೈನ್ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.
ಕಾನೂನು ಅಧಿಕಾರಿ, ಚಾರ್ಟರ್ಡ್ ಅಕೌಂಟೆಂಟ್, ತಜ್ಞ ಅಧಿಕಾರಿಗಳನ್ನು ಭರ್ತಿ ಮಾಡಲು ಮುಂದಾಗಿದೆ. ಹುದ್ದೆಗಳಿಗೆ ತಕ್ಕಂತೆ ವೇತನ ನೀಡಲಾಗುತ್ತದೆ. ಒಟ್ಟು ಖಾಲಿ ಇರುವ ಎಪ್ಪತ್ತೈದು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಹತೆ ಹಾಗೂ ವಿದ್ಯಾರ್ಹತೆಯ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ. ಆನ್ಲೈನ್ ಮೂಲಕ ಸಂದರ್ಶನ ಇರುತ್ತದೆ. ಆಯ್ಕೆ ಆದವರು ಮೂರು ವರ್ಷದ ಸೇವಾ ಬಾಂಡ್ ಗೆ ಸಹಿ ಮಾಡಲೇಬೇಕಾಗುತ್ತದೆ. ಮೂರು ವರ್ಷ ಕೆಲಸ ಮಾಡದಿದ್ದರೆ ದಂಡ ಕಟ್ಟಬೇಕಾಗುತ್ತದೆ.