ರಾತ್ರಿ ಸರಿಯಾದ ನಿದ್ರೆ ಬರುತ್ತಿಲ್ಲವೇ..?? ಕುಂಬಳಬೀಜ ತಿನ್ನಿ

WhatsApp
Telegram
Facebook
Twitter
LinkedIn

ನಿದ್ದೆಯೆಂಬುದು ಮರೀಚಿಕೆಯಾಗಿ ಒದ್ದಾಡುವ ಅಸಂಖ್ಯಾತ ಮಂದಿ ಇದ್ದಾರೆ. ನಿದ್ರಾಹೀನತೆಯ ಕಾರಣದ ಮೂಲ ಹುಡುಕುವ ಬದಲು, ನಿದ್ದೆ ಮಾತ್ರೆ ಗುಳುಂ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಏನೇನೆಲ್ಲ ಪ್ರಯೋಗಗಳನ್ನೂ ಮಾಡುವವರೂ ಇದ್ದಾರೆ. ಇವೆಲ್ಲವುಗಳ ನಡುವೆ ಕುಂಬಳಕಾಯಿ ಬೀಜವನ್ನು ಸೇವಿಸಿದ್ದೀರಾ? ಸತ್ವಗಳಿಂದ ಕೂಡಿದ ಈ ಪುಟ್ಟ ಬೀಜದಲ್ಲಿ, ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ (Health Tips). ಹಾಗಾಗಿ ಇವು ನಿದ್ರಾ ಹೀನತೆಗೆ ಮದ್ದಾಗಬಲ್ಲವು. ಕುಂಬಳಕಾಯಿ ಬೀಜ ಯಾವೆಲ್ಲ ಔಷಧೀಯ ಗುನ ಹೊಂದಿದೆ ಎನ್ನುವ ವಿವರ ಇಲ್ಲಿದೆ.

ಮೆಗ್ನೀಶಿಯಂ: ಇದನ್ನು ಮಾನಸಿಕ ಒತ್ತಡ ನಿವಾರಿಸುವ ಖನಿಜ ಅಥವಾ ರಿಲಾಕ್ಸೇಶನ್‌ ಮಿನರಲ್‌ ಎಂದೇ ಕರೆಯಲಾಗುತ್ತದೆ. ಪ್ರತಿ ದಿನ ನಮ್ಮ ದೇಹಕ್ಕೆ ಬೇಕಾಗುವ ಮೆಗ್ನೀಶಿಯಂನಲ್ಲಿ ಶೇ. 40ರಷ್ಟನ್ನು 28 ಗ್ರಾಂ ಕುಂಬಳಕಾಯಿ ಬೀಜಗಳು ನೀಡಬಲ್ಲವು. ದೇಹದ ಹಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ ನಮಗೆ ಮೆಗ್ನೀಶಿಯಂ ಅಗತ್ಯ. ರಕ್ತದೊತ್ತಡ ಸಮತೋಲನದಲ್ಲಿ ಇರಿಸುವುದು, ಸ್ನಾಯು ಮತ್ತು ನರಗಳ ಆರೋಗ್ಯ ರಕ್ಷಣೆ, ಮೂಳೆಗಳನ್ನು ಭದ್ರಗೊಳಿಸುವುದು ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವಂಥ ಹಲವು ಕೆಲಸಗಳು ಈ ಖನಿಜದಿಂದಾಗುತ್ತದೆ.

ಟ್ರಿಪ್ಟೊಫ್ಯಾನ್‌: ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿ ಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ದೂರ ಮಾಡಿ, ಕಣ್ತುಂಬಾ ನಿದ್ದೆ ತರಿಸಿ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವಲ್ಲಿ ಈ ಕಿರುಬೀಜಗಳದ್ದು ದೊಡ್ಡ ಕಾಣಿಕೆ.

ಪ್ರತಿರೋಧಕತೆ ಹೆಚ್ಚಳ: ವಿಟಮಿನ್‌ ಇ ಮತ್ತು ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿರುವ ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಸೋಂಕುಗಳ ವಿರುದ್ಧ ಹೋರಾಡುವಂಥ ಸಾಮರ್ಥ್ಯ ವಿಟಮಿನ್‌ ಇಗೆ ಇದೆ. ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಕಟ್ಟಿಹಾಕುವ ಸಾಧ್ಯತೆಯೂ ಇ ಜೀವಸತ್ವಕ್ಕಿದೆ. ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಸತುವಿನ ಕಾರ್ಯ ಸಾಮರ್ಥ್ಯ ಕಡಿಮೆಯೇನಿಲ್ಲ. ಜಿಂಕ್‌ ಕೊರತೆಯಾದರೆ ನಿದ್ದೆಯೂ ಕೊರತೆಯಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಕುಂಬಳ ಬೀಜವನ್ನು ಮೆಲ್ಲುವುದು ಲಾಭದಾಯಕ.

ಒಮೇಗಾ 3 ಕೊಬ್ಬು: ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಯುತ ಕೊಬ್ಬು ಮತ್ತು ಪ್ರೊಟೀನ್‌ಗಳಿವೆ. ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು. ಇದಕ್ಕಿಂತ ಮುಖ್ಯ ವಿಚಾರ ಎಂದರೆ ಆರೋಗ್ಯಕರ ಮೆದುಳು ಮಾತ್ರವೇ ಗುಣಮಟ್ಟದ ನಿದ್ದೆಯನ್ನು ನೀಡಬಲ್ಲದು. ಹಾಗಾಗಿ ಸುಮ್ಮನೆ ತಿನ್ನಿ, ಹುರಿದು ತಿನ್ನಿ, ಟೋಸ್ಟ್‌ ಮಾಡಿ ತಿನ್ನಿ, ಬೇರೆ ಖಾದ್ಯಗಳಿಗೆ ಬಳಸಿಯಾದರೂ ಸರಿ, ಕುಂಬಳ ಬೀಜವನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ.

ಗ್ಲೈಸಿನ್‌: ಇದೊಂದು ಅಷ್ಟಾಗಿ ಪ್ರಚಾರದಲ್ಲಿ ಇಲ್ಲದ ಅಮೈನೊ ಆಮ್ಲ. ಈ ಗ್ಲೈಸಿನ್‌ ನಮ್ಮ ದೇಹದ ತಾಪಮಾನವನ್ನು ಕಡಿಮೆ ಮಾಡಬಲ್ಲದು. ಇದರಿಂದ ನಿದ್ದೆ ಮಾಡುವ ಸಮಯವಿದು ಎಂಬುದನ್ನು ಮೆದುಳಿನ ನ್ಯೂರೊಟ್ರಾನ್ಸ್‌ಮಿಟರ್ಗಗಳು ದೇಹಕ್ಕೆ ಸೂಚಿಸುತ್ತವೆ. ಹಾಗಾಗಿ ಕುಂಬಳಬೀಜಗಳನ್ನು ಬಳಸಿ, ಆರೋಗ್ಯ ಹೆಚ್ಚಿಸಿಕೊಳ್ಳಿ.

ನಿದ್ರಾಹೀನತೆಯನ್ನು ನಿವಾರಿಸುವುದರ ಜತೆಗೆ ಹಲವು ಸಮಸ್ಯೆಗಳಿಗೆ ಸರಳ ಪರಿಹಾರದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಬೀಜಗಳು ಕಳ್ಳ ಹಸಿವೆಯನ್ನು ನಿವಾರಿಸುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜತೆಗೆ ಬಾಯಿಗೆಸೆದುಕೊಳ್ಳಬಹುದು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon