ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳು ಸಹಕರಿಸುತ್ತವೆ.
ಸೇಬು ಹಣ್ಣುನ್ನು ಸೇವಿಸುವುದರಿಂದ ಬಾಯಿಯಲ್ಲಿ ಲಾಲಾರಸ ಹೆಚ್ಚು ಉತ್ಪಾದನೆಯಾಗಿ ಆಸಿಡ್ ಅಂಶವನ್ನು ನಿರ್ಮೂಲನೆ ಮಾಡುತ್ತದೆ ಮತ್ತು ಆಹಾರದ ಕಣಗಳನ್ನು ಸ್ವಚ್ಛಗೊಳಿಸುತ್ತದೆ. ಕ್ಯಾರೆಟ್ ಸೇವನೆಯಿಂದ ಹಲ್ಲುಗಳ ಮೇಲ್ಭಾಗ ಸ್ವಚ್ಛವಾಗುತ್ತದೆ ಮತ್ತು ಇದರಲ್ಲಿರುವ ವಿಟಮಿನ್ ಎ ಅಂಶ ಹಲ್ಲು ಹಾಗೂ ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ. ಗ್ರೀನ್ ಟೀ ಸೇವನೆಯಿಂದ ಬಾಯಿಯಲ್ಲಿನ ಕೆಟ್ಟ ಬ್ಯಾಕ್ಟಿರಿಯಾಗಳು ನಾಶವಾಗಿ, ಬಾಯಿಯ ಕೆಟ್ಟ ವಾಸನೆ ಸ ನಿರ್ಮೂಲನೆಯಾಗುತ್ತದೆ.