ಮಳೆಗಾಲದಲ್ಲಿ ಹುಷಾರು ತಪ್ಪುವ ಸಾಧ್ಯತೆ ಹೆಚ್ಚಿಸುವುದರಿಂದ, ಈ ಸಮಯದಲ್ಲಿ, ನಾವು ಸೇವಿಸುವ ಆಹಾರ ಪದ್ದತಿಯ ಮೇಲೆ ತುಂಬಾನೇ ಜಾಗರೂಕತೆ ವಹಿಸಬೇಕು
ಮಳೆಗಾಲದಲ್ಲಿ ವಾತಾವರಣದಲ್ಲಿ ಆಗುತ್ತಿರುವ ಏರುಪೇರಿನಿಂದಾಗಿ, ಆರೋಗ್ಯ ಸಮಸ್ಯೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಸಣ್ಣ ದಾಗಿ ಶೀತದ ಸಮಸ್ಯೆ ಎದುರಾಗಿ, ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ, ಕಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ, ಗಂಟಲಿನಲ್ಲಿ ಕಿರಿಕಿರಿಯ ಜೊತೆಗೆ ಸೀನುವುದು ಮಾಮೂಲಿ ಆಗಿರುತ್ತದೆ. ಆಮೇಲೆ ಒಂದೆರಡು ದಿನಗಳಲ್ಲಿ, ಮೈಕೈ ಕಾಣಿಸಿಕೊಂಡು ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ, ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುವುದು!
ಹಾಗಾಗಿ ಮಳೆಗಾಲದಲ್ಲಿ ನಾವು ಸೆವಿಸುವ ಆಹಾರ ಪದ್ಧತಿಯ ಮೇಲೆ ಹೆಚ್ಚು ಗಮನ ಕೊಡಬೇಕು. ಈ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ಇಷ್ಟವಿಲ್ಲದಿದ್ದರೂ ತಿನ್ನಬೇಕು ಹಾಗೂ ಕೆಲವೊಂದು ಆಹಾರಗಳನ್ನು ತಿನ್ನುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡಬೇಕು! ಆರೋಗ್ಯಕರ ಜೀವನ ಶೈಲಿಯ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯೂ ಕೂಡ ನಮ್ಮದಾಗಬೇಕು. ಇಂತಹ ಅಭ್ಯಾಸದಿಂದ ಮಾತ್ರ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲು ಸಾಧ್ಯ. ಬನ್ನಿ ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ಯಾವೆಲ್ಲಾ ಅಹಾರಗಳನ್ನು ಸೇವನೆ ಮಾಡಬೇಕು ಎನ್ನುವುದನ್ನು ನೋಡೋಣ…
ಮಳೆಗಾಲದಲ್ಲಿ ಕೆಲವೊಂದು ತರಕಾರಿಗಳಿಂದ ದೂರವಿರಬೇಕು!
ಹಸಿರೆಲೆ ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ಯಾವಾ ಗಲೂ ಒಳ್ಳೆಯದು. ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ವಿಟಮಿನ್ಸ್ ಗಳು, ಪೋಷಕಾಂ ಶಗಳು, ಹಲವಾರು ಬಗೆಯ ಖನಿಜಾಂಶಗಳು ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಕೆಲವೊಂದು, ತರಕಾರಿಗಳನ್ನು ಮಳೆಗಾಲದಲ್ಲಿ ಮಾತ್ರ ಸೇವನೆ ಮಾಡಲೇ ಬಾರದಂತೆ! ಉದಾಹರಣೆಗೆ ಪಾಲಕ್ ಸೊಪ್ಪು, ದಂಟಿನ ಸೊಪ್ಪು, ಹೂಕೋಸು, ಎಲೆಕೋಸು, ಬ್ರೊಕೋಲಿ ಇಂತಹ ತರಕಾರಗಳನ್ನು ಜಾಸ್ತಿ ಸೇವನೆ ಮಾಡಬಾರದಂತೆ!
ಇದಕ್ಕೆ ಪ್ರಮುಖ ಕಾರಣ ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ಸೋಂಕುಕಾರಕ ಕ್ರಿಮಿಗಳು, ಇಂತಹ ಹಸಿರೆಲೆ ತರಕಾರಿಗಳ ಮೇಲೆ ತಮ್ಮ ವಾಸಸ್ಥಾನ ಮಾಡಿ ಕೊಂಡಿರುತ್ತವೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಇವುಗಳಿಂದ ದೂರವಿದ್ದರೆ ಒಳ್ಳೆಯದು.
ಹಾಗಾದ್ರೆ ಯಾವ ತರಕಾರಿಗಳನ್ನು ಸೇವನೆ ಮಾಡಬೇಕು?
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಮಳೆಗಾಲ ದಲ್ಲಿ, ಮನುಷ್ಯನಿಗೆ ಜೀರ್ಣಶಕ್ತಿಯ ಪ್ರಕ್ರಿಯೆ ಯು ತುಂಬಾನೇ ಕಡಿಮೆ ಇರುತ್ತದೆಯಂತೆ. ಹಾಗಾಗಿ ಬೇಗನೆ ಜೀರ್ಣ ಆಗುವಂತಹ ಆಹಾರ ಪದಾರ್ಥಗಳನ್ನು ಮಳೆಗಾಲದಲ್ಲಿ ಸೇವನೆ ಮಾಡ ಬೇಕು.
ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಹಾಗಲಕಾಯಿ, ಸೋರೆ ಕಾಯಿ, ಕುಂಬಳಕಾಯಿ, ಸಿಹಿಗೆಣಸು ಇತ್ಯಾದಿ ಗಳನ್ನು ಸೇವನೆ ಮಾಡಿದರೆ ಒಳ್ಳೆಯದು. ಇಂತಹ ತರಕಾ ರಿಗಳು ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ರಾಗಿಯಿಂದ ಮಾಡಿದ ಆಹಾರ ಪದಾರ್ಥಗಳು
ರಾಗಿಯಿಂದ ಮಾಡಿರುವಂತಹ ಪ್ರತಿಯೊಂದು ಆಹಾರ ಪದಾರ್ಥಗಳು ಕೂಡ, ಮನುಷ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಇದಕ್ಕೆ ಪ್ರಮುಖ ಕಾರಣ ರಾಗಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಆರೋಗ್ಯವನ್ನು ಕಾಪಾಡಲು ತುಂಬಾನೇ ಲಾಭಕಾರಿ ಎಂದು ಹೇಳಲಾಗುತ್ತದೆ.
ಪ್ರಮುಖವಾಗಿ ರಾಗಿಯಲ್ಲಿ ಉನ್ನತ ಮಟ್ಟದ ಕ್ಯಾಲ್ಸಿ ಯಂ, ಅಧಿಕ ನಾರಿನಾಂಶ, ಕಬ್ಬಿಣಾಂಶ, ವಿಟಮಿನ್ ಸಿ ಹಾಗೂ ಎಲ್ಲಕ್ಕಿಂತ ಪ್ರಮುಖವಾಗಿ ಗ್ಲುಟೇನ್ ಮುಕ್ತ ವಾಗಿದೆ.
ರಾಗಿಯಿಂದ ಮಾಡಿದ, ರಾಗಿ ಮುದ್ದೆ, ರೊಟ್ಟಿ, ದೋಸೆ, ಇಡ್ಲಿ…
ಹೀಗಾಗಿ ರಾಗಿಯಿಂದ ಮಾಡಿರುವಂತಹ ಆಹಾರ ಪದಾ ರ್ಥಗಳನ್ನು ನಿತ್ಯವೂ ಸೇವನೆ ಮಾಡಿದರೆ, ಅದರಿಂದ ಅನಾರೋಗ್ಯಗಳು ದೂರವಿರುವುದು ಮಾತ್ರವಲ್ಲದೆ, ಮಳೆಗಾಲದಲ್ಲಿ ಆರೋಗ್ಯವು ಕೂಡ ಉತ್ತಮವಾಗಿ ರುವುದು.
ಹೀಗಾಗಿ ಮಳೆಗಾಲದಲ್ಲಿ ರಾಗಿಯಿಂದ ಮಾಡಿದ, ರಾಗಿ ಮುದ್ದೆ, ರೊಟ್ಟಿ, ದೋಸೆ, ಇಡ್ಲಿ, ಹೀಗೆ ರಾಗಿ ಬಳಸಿ ಮಾಡಿದ ಆಹಾರ ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.
ಬೇಳೆಕಾಳುಗಳು
ಆಹಾರ ಪದ್ಧತಿಯಲ್ಲಿ ಬೇಳೆಕಾಳುಗಳನ್ನು ಹೆಚ್ಚಾಗಿ ಬಳಸಿ. ಯಾಕೆಂದ್ರೆ ಬೇಳೆಕಾಳುಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಹಾಗೂ ಉನ್ನತ ಮಟ್ಟದ ಪ್ರೋಟೀನ್ ಅಂಶವಿರುವ, ಆರೋಗ್ಯಕ್ಕೆ ಮಾರಕವಾಗಿರುವ ಗ್ಲುಟೆನ್ ಅಂಶವು ಕೂಡ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.
ಅಷ್ಟೇ ಅಲ್ಲದೆ ಬೇಳೆಕಾಳುಗಳಲ್ಲಿ ಆರೋಗ್ಯಕ್ಕೆ ಬೇಕಾಗುವ ನಾರಿನಾಂಶ, ಪ್ರೋಟಿನ್, ಫೋಲೆಟ್ ಮತ್ತು ವಿಟಮಿನ್ ಬಿ ಅಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ.


































