ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಬಾದಾಮಿ ತಿಂದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಮಾತ್ರವಲ್ಲದೆ ಇವು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬಾದಾಮಿ ಜೊತೆಗೆ ಖರ್ಜೂರ ಸೇವಿಸುವುದರಿಂದ ದೇಹದಲ್ಲಿ ದಿನವಿಡೀ ಶಕ್ತಿ ವೃದ್ಧಿಯಾಗುತ್ತದೆ. ವಾಲ್ ನಟ್ಸ್ ತಿನ್ನುವುದರಿಂದ ಸಾಕಷ್ಟು ಪ್ರೊಟೀನ್, ಆ್ಯಂಟಿ ಆಕ್ಸಿಡೆಂಟ್, ಡಯೆಟರಿ ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ದೊರೆಯುತ್ತದೆ. ಬೆಳಿಗ್ಗೆ ಒಣದ್ರಾಕ್ಷಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇವು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.