ಜಿಎಸ್ಟಿ ಸುಧಾರಣೆ ಬೆನ್ನಲ್ಲೇಗ್ರಾಹಕ ಬಳಕೆಯ ಉತ್ಪನ್ನಗಳ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಯು ತನ್ನ ಉತ್ಪನ್ನಗಳ ಬೆಲೆ ಕಡಿತ ಘೋಷಿಸಿದೆ.
ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಡೌವ್ ಶಾಂಪೂ, 340 ಎಂಎಲ್ ಬಾಟಲ್ ಬೆಲೆ 490 ರೂಪಾಯಿಯಿಂದ 435 ರೂಪಾಯಿಗೆ ಇಳಿಸಿದೆ. 200 ಗ್ರಾಂ ಜಾರ್ ಹಾರ್ಲಿಕ್ಸ್ ಬೆಲೆಯು 130 ರೂಪಾಯಿಯಿಂದ 110 ರೂಪಾಯಿಗೆ ಇಳಿದಿದೆ. ಇನ್ನೂ 200 ಗ್ರಾಂ ಕಿಸಾನ್ ಜಾಮ್ ಬೆಲೆಯನ್ನು 90 ರೂಪಾಯಿಯಿಂದ 80 ರೂಪಾಯಿಗೆ ಇಳಿಕೆ ಮಾಡಲಾಗಿದೆ. 75 ಗ್ರಾಂ ಲೈಫ್ ಬಾಯ್ ಸೋಪ್ ಬೆಲೆ 68 ರೂಪಾಯಿಯಿಂದ 60 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಚಿಲ್ಲರೆ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ.