ನವದೆಹಲಿ : ಈದ್-ಉಲ್-ಫಿತರ್ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು. ಈ ಹಬ್ಬ ಎಲ್ಲ ಸಂತೋಷ ಮತ್ತು ಯಶಸ್ಸು ತರಲಿ. ಈದ್ ಮುಬಾರಕ್ ಎಂದು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ನಾಡಿನ ಜನತೆಗೆ ಈದ್ – ಉಲ್ – ಫಿತರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಈ ಈದ್-ಉಲ್-ಫಿತರ್ ಸಹೋದರತ್ವ ಹೆಚ್ಚಿಸಿ, ಸಹಾನುಭೂತಿ ಮತ್ತು ದಾನವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ದೇಶದ ಜನರಿಗೆ ಈದ್ – ಉಲ್ – ಫಿತರ್ ಹಬ್ಬದ ಶುಭಾಶಯಗಳು, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಸಹೋದರತ್ವವನ್ನು ಬಲಪಡಿಸುವ ಹಬ್ಬ ಇದಾಗಿದ್ದು, ಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಮತ್ತು ಪ್ರತಿಯೊಬ್ಬರ ಹೃದಯಗಳಲ್ಲಿ ಒಳ್ಳೆಯತನದ ಹಾದಿಯಲ್ಲಿ ಮುನ್ನಡೆಯುವ ಮನೋಭಾವವನ್ನು ಬಲಪಡಿಸಲಿ ಎಂದು ಪೋಸ್ಟ್ ಮಾಡಿದ್ದಾರೆ.
ಈ ಸಂತೋಷದಾಯಕ ಸಂದರ್ಭವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಶಾಂತಿ, ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ರಾಹುಲ್ ಗಾಂಧಿ ಶುಭ ಹಾರೈಸಿದ್ದಾರೆ.
ದ್ವೇಷಾಸೂಯೆಗಳನ್ನು ಸುಟ್ಟು ಪ್ರೀತಿ, ಬಾಂಧವ್ಯಗಳನ್ನು ಬೆಸೆಯುವ ಪವಿತ್ರ ಈದ್ – ಉಲ್ – ಫಿತ್ರ್ ಹಬ್ಬದ ಸಂದೇಶ ಮನುಕುಲದ ಹಾದಿಗೆ ದಾರಿದೀಪವಾಗಲಿ, ನಾಡಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲೆಂದು ಹಾರೈಸುತ್ತೇನೆ. ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.