ಚಿತ್ರದುರ್ಗ: ಹಿರಿಯೂರು ತಾಲ್ಲೂಕು ದೇವರಕೊಟ್ಟ ಏಕಲವ್ಯ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಈ ಸಂಬಂಧ 5ನೇ ತರಗತಿಯಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜ.31 ಅರ್ಜಿ ಸಲ್ಲಿಸಲು ಕೊನೆಯ ದಿನ.
2025ರ ಜನವರಿ 02 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಜ.31 ಅರ್ಜಿ ಸಲ್ಲಿಸಲು ಕೊನೆಯ ದಿನ. ಫೆ.17ರಂದು ಪ್ರವೇಶಾತಿ ಪರೀಕ್ಷೆಗಾಗಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು. ಫೆ.28ರಂದು ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಮಾರ್ಚ್ 10 ರ ನಂತರ ಫಲಿತಾಂಶ ಬಿಡುಗಡೆಯಾಗಲಿದೆ. ಮೇ.11 ಪ್ರವೇಶಾತಿ ಪ್ರಕ್ರಿಯೆಗೆ ಅಂತಿಮ ದಿನವಾಗಿದೆ.
ಜಿಲ್ಲಾ ಪರಿಶಿಷ್ಟ ವರ್ಗಗಳವರ ಕಚೇರಿ, ಚಿತ್ರದುರ್ಗ, ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಹಿರಿಯೂರು ತಾಲ್ಲೂಕು ದೇವರಕೊಟ್ಟ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಅರ್ಜಿ ದೊರೆಯಲಿದೆ.
ಅರ್ಜಿ ಸಲ್ಲಿಕೆಯ ವಯಸ್ಸಿನ ಮಿತಿ ಕನಿಷ್ಟ 2025ರ ಮಾರ್ಚ್ 31ರಂತೆ 10 ವರ್ಷಗಳು, ಗರಿಷ್ಟ 2025ರ ಮಾರ್ಚ್ 3ರಂತೆ 13 ವರ್ಷಗಳು ಆಗಿದೆ. ಗಂಡು ಮಕ್ಕಳಿಗೆ 30 ಸೀಟುಗಳು, ಹೆಣ್ಣು ಮಕ್ಕಳಿಗೆ 30 ಸೀಟುಗಳು ಸೇರಿದಂತೆ ಒಟ್ಟು 60 ಪ್ರವೇಶಾತಿ ಸೀಟುಗಳು ಲಭ್ಯವಿವೆ.
ಪರಿಶಿಷ್ಟ ವರ್ಗ, ಪಿವಿಟಿಜಿ ವರ್ಗಗಳು, ಡಿಎನ್‍ಟಿ, ಎನ್‍ಟಿ, ಎಸ್‍ಎನ್‍ಟಿ ವರ್ಗಗಳು, ಡಿಎನ್‍ಟಿ, ಎನ್‍ಟಿ, ಎಸ್‍ಎನ್‍ಟಿ ವರ್ಗಗಳು, ನಕ್ಸಲರಿಂದ ಮರಣ ಹೊಂದಿದ, ಕೋವಿಡ್‍ನಿಂದ ಮರಣ ಹೊಂದಿದ, ದಂಗೆಗಳಿಂದ ಮರಣ ಹೊಂದಿದ, ಪೋಷಕರ ಮಕ್ಕಳು, ಪತಿಯನ್ನು ಕಳೆದುಕೊಂಡ ವಿಧವೆಯರ ಮಕ್ಕಳು, ದಿವ್ಯಾಂಗ ಪೋಷಕರ ಮಕ್ಕಳು, ಅನಾಥ ಮಕ್ಕಳು, ಭೂದಾನಿ ಮಕ್ಕಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.