ಚಿತ್ರದುರ್ಗ : ನಗರದ ಕಬೀರಾನಂದ ಬಡಾವಣೆಯಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿ ಫೆ. 9 ರಿಂದ 15ರವರೆಗೆ ನಡೆಯಲಿರುವ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯರಾದ ಭಾಸ್ಕರ್ರವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಶ್ರೀ ಕಬೀರಾನಂದಾಶ್ರಮದ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಹಾಗೂ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮತ್ತು ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯರಾದ ಭಾಸ್ಕರ್ರವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಹಿಂದಿನ ಕಾಲದಲ್ಲಿ ಸಣ್ಣದಾಗಿ ನಡೆಯುತ್ತಿದ್ದ ಶಿವನಾಮ ಸಪ್ತಾಹ ಇಂದಿನ ದಿನದಲ್ಲಿ ಅದ್ದೂರಿಯಾಗಿ, ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ ಇದು ಮಠಕ್ಕೆ ಹೊರೆಯಾಗುತ್ತಿದೆ ಇದರ ಬಗ್ಗೆ ಭಕ್ತಾಧಿಗಳು ಗಮನ ನೀಡಬೇಕಿದೆ ಸಾಧ್ಯವಾದಷ್ಟು ಮಠಕ್ಕೆ ಆಗುವ ಹೊರೆಯನ್ನು ತಪ್ಪಿಸಬೇಕಿದೆ ಇದರ ಹೊಣೆಗಾರಿಕೆ ಭಕ್ತರ ಮೇಲಿದೆ. ಹಿಂದಿನ ದಿನದಲ್ಲಿ ನಡೆದ ಶಿವನಾಮ ಸಪ್ತಾಹದಲ್ಲಿ ವಿವಿಧ ರೀತಿಯ ಕೊರತೆಗಳನ್ನು ಅನುಭವಿಸಲಾಗಿದೆ, ಇದನ್ನು ಈ ಸಮಯದಲ್ಲಿ ನಿವಾರಣೆ ಮಾಡಬೇಕಿದೆ. ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಧನ ಸಹಾಯವನ್ನು ಮಾಡಬೇಕಿದೆ ಚಿತ್ರದುರ್ಗದಲ್ಲಿ ವಿವಿಧ ಮಠಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ ಆದರೆ ಶಿವರಾತ್ರಿಯನ್ನು ಕಬೀರಾನಂದಾಶ್ರಮದಲ್ಲಿ ಮಾತ್ರವೇ ಮಾಡಲಾಗುತ್ತಿದೆ ಮುಂದಿನ ದಿನದಲ್ಲಿ ಶಿವನಾಮ ಸಪ್ತಾಹ ಮಧ್ಯ ಕರ್ನಾಟಕದ ನಾಡ ಹಬ್ಬವಾಗಿ ಪರಿಣಮಿಸಬೇಕಿದೆ ಎಂದರು.
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಈ ಮುಂಚೆ ಸಣ್ಣದಾಗಿ ಪ್ರಾರಂಭವಾದ ಶಿವನಾಮ ಸಪ್ತಾಹ ತದ ನಂತರ ದೊಡ್ಡದಾಗಿ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಚನ್ನಾಗಿ ನಡೆಸಲಾ ಗುತ್ತಿದೆ. ಚಿಕ್ಕದಾದ ಸ್ಥಳದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಇಂದು ಬೃಹತ್ ವೇದಿಕೆಯನ್ನು ನಿರ್ಮಾಣ ಅದರಲ್ಲಿ ಮಾಡಲಾಗುತ್ತಿದೆ. ವರ್ಷದಲ್ಲಿ ಹೊಸಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ಶಿವನಾಮ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.
96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನೇಮಕವಾಧ ಭಾಸ್ಕರ ಮಾತನಾಡಿ ಪ್ರತಿ ವರ್ಷಕ್ಕಿಂತ ಈ ಭಾರಿ ಶಿವನಾಮ ಸಪ್ತಾಹವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಗುವುದು ಇದಕ್ಕೆ ಬೇಕಾದ ಸಹಾಯ ಸಹಕಾರವನ್ನು ನೀಡಲಾಗುವುದು. ನನಗೆ ಈ ಬಾರಿ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ, ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ, ಎಲ್ಲರ ಸಹಕಾರದಿಂದ 96ನೇ ಶಿವನಾಮ ಸಪ್ತಾಹವನ್ನು ಆಚರಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ನರಸಿಂಹರಾಜು, ನಗರಸಭೆಯ ಮಾಜಿ ಸದಸ್ಯರಾದ ವೆಂಕಟೇಶ್, 95ನೇಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾದ ವಿಜಯಕುಮಾರ್, ಪರಮೇಶ್, ಕಾರ್ಯದರ್ಶಿ ಪ್ರಶಾಂತ್ಕುಮಾರ್, ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಯೋಗೀಶ್, ರಮೇಶ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

































