ನವದೆಹಲಿ: ಬಿಹಾರದ ನಂತರ ಚುನಾವಣಾ ಆಯೋಗವು ಭಾರತದ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ SIR (ಮತದಾರರ ಪಟ್ಟಿ ಪರಿಷ್ಕರಣೆ) ಅನ್ನು ಘೋಷಿಸಿದೆ.
SIR ಪ್ರಕ್ರಿಯೆಯ ಅಡಿಯಲ್ಲಿ ಬರುವ 12 ರಾಜ್ಯಗಳು ಮತ್ತು ಕೇಂದ್ರಡಾಳಿತ ಪ್ರದೇಶಗಳ ಮತದಾರರ ಪಟ್ಟಿಯನ್ನು ಇಂದು ರಾತ್ರಿ ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಚುನಾವಣಾ ಆಯೋಗ ಇತ್ತೀಚೆಗೆ SIR ಅನ್ನು ಮುಕ್ತಾಯಗೊಳಿಸಿತ್ತು. ಈ ಪ್ರಕ್ರಿಯೆಯು 243 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಮುಖ ಘರ್ಷಣೆಯನ್ನು ಉಂಟುಮಾಡಿತು.































