ಬಿಹಾರ: ಹೌದು ಮಟನ್ ಗಾಗಿ ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಬಿಹಾರದ ಗಯಾ ಜಿಲ್ಲೆಯ ದುಭಾಲ್ ಗ್ರಾಮದಲ್ಲಿ ನಡದಿದೆ.
ಆರೋಪಿ ಶಿವಶಂಕರ್ ಸಿಂಗ್ ಎಂಬಾತ ತನ್ನ ಅಣ್ಣ ಉಮಾಶಂಕರ್ ಸಿಂಗ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಂಭೀರ ಗಾಯಗೊಂಡ ಉಮಾಶಂಕರ್ ಸಿಂಗ್ ಅವರನ್ನು ಅನುಗ್ರಹ ನಾರಾಯಣ್ ಮಗಧ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಪೊಲೀಸರ ಪ್ರಕಾರ, ಸ್ಥಳೀಯ ಮಟನ್ ಅಂಗಡಿಯಲ್ಲಿ ಶಿವಶಂಕರ್ ಸಿಂಗ್ ಮೊದಲು ಮಟನ್ ಪಡೆಯಬೇಕೆಂದು ಒತ್ತಾಯಿಸಿದಾಗ ಜಗಳವಾಗಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ದೈಹಿಕವಾಗಿ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಉಮಾಶಂಕರ್ ಸಿಂಗ್ ತನ್ನ ಕಿರಿಯ ಸಹೋದರನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಕೋಪದ ಭರದಲ್ಲಿ, ಶಿವಶಂಕರ್ ಸಿಂಗ್ ಅವನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಅವನು ಸಾವನ್ನಪ್ಪಿದ್ದಾನೆ.!