ಕೇಂದ್ರ ಲೋಕಸೇವಾ ಆಯೋಗ ಅಂದರೆ ಯುಪಿಎಸ್‌ಸಿ ಇಪಿಎಫ್‌ಒ ಕಚೇರಿಯಲ್ಲಿ ಉದ್ಯೋಗವಕಾಶವಿದ್ದು ಆಸಕ್ತರು ಪ್ರಯತ್ನಿಸಬಹುದು. ನೂರಾರು ಜಾರಿ ಅಧಿಕಾರಿ/ಖಾತೆ ಅಧಿಕಾರಿ ಮತ್ತು ಸಹಾಯಕ ಪಿಎಫ್ ಆಯುಕ್ತ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಖಾತೆ ಅಧಿಕಾರಿ ಮತ್ತು ಸಹಾಯಕ ಪಿಎಫ್ ಆಯುಕ್ತರು ಹುದ್ದೆ ಖಾಲಿಯಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಡಿಗ್ರಿ ಪದವಿಯನ್ನು ಹೊಂದಿರಬೇಕು.ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯುಪಿಎಸ್‌ಸಿ upsc.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಅಗಸ್ಟ್ ೧೮ ಆಗಿರುತ್ತದೆ.
ಹುದ್ದೆಗಳಿಗೆ ನೇಮಕಾತಿ ಮಾಡುವ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಮೊದಲನೆಯದಾಗಿ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಅದರಲ್ಲಿ ಉತ್ತೀರ್ಣರಾದರೆ, ಅವರಿಗೆ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಸಿಗುತ್ತದೆ. ಪರೀಕ್ಷೆಯ ದಿನಾಂಕವನ್ನು ವೆಬ್ಸೈಟ್ ನಲ್ಲಿ ತಿಳಿಸಲಾಗುತ್ತದೆ.