ಚಾಮರಾಜನಗರ: ಸಫಾರಿ ವಾಹನದ ಮೇಲೆ ಕಾಡಾನೆಯೊಂದು ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ನಡೆದಿದೆ.
ಸಫಾರಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಸಫಾರಿ ಜೀಪ್ ಕಂಡ ಕೂಡಲೇ ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಚಾಲಕ ಎಚ್ಚೆತ್ತುಕೊಂಡು ಜೀಪ್ ಅನ್ನು ರಿವರ್ಸ್ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ.
ಕೋಪಗೊಂಡ ಕಾಡಾನೆ ಸಫಾರಿ ಜೀಪ್ ಅನ್ನು ಅಟ್ಟಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.