ಬೆಂಗಳೂರು: ವಿಜಯೇಂದ್ರ ಭೇಟಿಯಾಗೋ ಅವಶ್ಯಕತೆ ನನಗಿಲ್ಲ, ವಿಜಯೇಂದ್ರ ಬಂದು ನನ್ನನ್ನು ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ವಿಜಯೇಂದ್ರ ಅಮಿತ್ ಶಾ ಭೇಟಿ ಮಾಡಿ ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂದು ನನಗೆ ಗೊತ್ತಿಲ್ಲ. ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು ಎಂದಿದ್ದಾರೆ.
ನನ್ನನ್ನ ಯಾಕೆ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ? ನಾನು ಯಾರೊಂದಿಗು ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಜೊತೆ ನನ್ನ ಅಡ್ಜೆಸ್ಟ್ಮೆಂಟ್ ಇಲ್ಲ. ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಟ್‌ಮೆಂಟ್ ಕೊಡುತ್ತಿದ್ದಾರೆ ಅದಕ್ಕೆ ಹೋಗುತ್ತಾರೆ. ಆದರೆ ನಾವು ಯಾರ ಅಪಾಯಿಟ್‌ಮೆಂಟ್ ಕೇಳಿಲ್ಲ. ನಾವು ಯಾರ ಮೇಲೂ ದೂರು ಕೊಡುವುದಿಲ್ಲ. ನಮ್ಮದು ಜನರ ಆಂದೋಲ. ನಮ್ಮದು ದಿಲ್ಲಿ ಆಂದೋಲ ಅಲ್ಲ. ನನ್ನಂತ ಪಕ್ಷ ನಿಷ್ಠ ಯಾರು ಇಲ್ಲ. ನಾನು ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ. ನಾನು ಹಿಂದೂಗಳಿಂದ ಬಿಜೆಪಿಯಿಂದ ಶಾಸಕ ಆಗಿರೋದು. ಯತ್ನಾಳ್ ಏನು ಎಂದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.