ಚಿತ್ರದುರ್ಗ : ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಆಚರಿಸುವ ಬದಲು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದರೆ ಪರಿಸರಕ್ಕೆ ಹಸಿರು ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಎಸ್.ಬಾಗೋಡಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಸಬಾ ವಲಯ ಮುಸಂಡಿಹಾಳ್ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದಲ್ಲಿ ಬುಧವಾರ ನಡೆದ ಸಭೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಗಾಟಿಸಿ ಮಾತನಾಡಿದರು.
ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮಿಸಿದರೆ ಪರಿಸರಕ್ಕೆ ಹಾನಿಯಾಗುತ್ತದೆ. ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ಎಲ್ಲರೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಪರಿಸರ ಹಚ್ಚ ಹಸಿರಾಗಿರುತ್ತದೆ. ಇದರಿಂದ ಸಕಲ ಜೀವ ರಾಶಿಗಳಿಗೂ ಶುದ್ದವಾದ ಗಾಳಿ ಸಿಗುತ್ತದೆ. ಈಗ ಹಣ ನೀಡಿ ನೀರಿನ ಬಾಟಲಿಯನ್ನು ಖರೀಧಿಸುತ್ತಿದ್ದೇವೆ. ಮುಂದೊಂದು ದಿನ ಗಾಳಿಯನ್ನು ಹಣ ನೀಡಿ ಖರೀಧಿಸುವಂತ ಕಾಲ ಬರುತ್ತದೆ. ಹಾಗಾಗಿ ಪರಿಸರವನ್ನು ಹಾಳು ಮಾಡಬಾರದು ಎಂದು ಹೇಳಿದರು.
ಗೀತ, ಗೌರಮ್ಮ, ಸವಿತ, ಭಾಗ್ಯಮ್ಮ, ಸಾವಿತ್ರಿ, ಸವಿತ, ಶಶಿಕಲ, ಪುಷ್ಪ, ಅನ್ನಪೂರ್ಣ, ರೂಪ, ಕವಿತಾ, ಮಂಜುಳ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.