ಚಿತ್ರದುರ್ಗ: ರಾಜ್ಯದಲ್ಲಿ ಅಭಿವೃದ್ಧಿ ಕುಸಿದು, ಆಡಳಿತ ಯಂತ್ರ ಸ್ಥಗಿತವಾಗಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ.ಸರ್ಕಾರ ಇದ್ದು ನಮ್ಮ ಪಾಲಿಗೆ ಸತ್ತಂತಾಗಿದೆ ಬ್ರೇಕ್ ಪಾಸ್ಟ್ ಮಾಡಿಕೊಂಡೆ ಸಮಯ ಕಳೆಯಲಿ ಇದೇ ಮಾಡಿಕೊಂಡು 2.5 ವರ್ಷ ಕಳೆದು ಬಿಟ್ಟಿದ್ದಾರೆ ಎಂದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ರೇಕ್ ಪಾಸ್ಟ್ ಮಾಡ್ತಾರೋ, ಲಂಚ್ ಮಾಡ್ತಾರೋ ಡಿನ್ನರ್ ಮಾಡ್ತಾರೋ ಗೊತ್ತಿಲ್ಲ.ನಮ್ಮ ರೈತರಿಗೆ ನ್ಯಾಯ ಸಿಗಬೇಕಿದೆ.ಸಿಎಂ ಸಿದ್ದರಾಮಯ್ಯ ಕದನ ವಿರಾಮ ಎಂದು ಹೇಳುತ್ತಿದ್ದಾರೆ ರಷ್ಯಾ ಮತ್ತು ಉಕ್ರೇನ್ ಇದೇ ರೀತಿ ಕದನ ವಿರಾಮ ಆಗಿತ್ತು ಮೂರು ತಿಂಗಳ ಬಳಿಕ ಒಬ್ಬರಿಗೊಬ್ಬರು ಬಾಂಬ್ ಹಾಕಿದ್ದರು ಡಿಕೆಶಿ ಹಾಗು ಸಿದ್ದರಾಮಯ್ಯ ಯಾವತ್ತೂ ಪರಸ್ಪರ ಬಾಂಬ್ ಹಾಕುತ್ತಾರೋ ಗೊತ್ತಿಲ್ಲ ಎಂದರು.
ಬಿ.ವೈ. ವಿಜಯೇಂದ್ರ ಪಾರ್ಟಿ ಅಧ್ಯಕ್ಷರಾದ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಎಲೆಕ್ಷನ್ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಎಂದು ಹೇಳಿದ್ದರು. ಸಂಸತ್ ಅಧಿವೇಶನ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಬಹುದು.ಹೊಸ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಬಳಿಕ ಪಕ್ಷ ಎಲ್ಲರ ಅಭಿಪ್ರಾಯ ಪಡೆದು ರಾಜ್ಯ ಅಧ್ಯಕ್ಷರ ನೇಮಕ ಮಾಡುತ್ತದೆ ಮುಂದೆ ವಿಜಯೇಂದ್ರ ಅವರನನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಬೇಕು ಎಂದು ಹೇಳುತ್ತೇವೆ ಎಂದು ಶ್ರೀರಾಮು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂಟು ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಿದ್ದೇವೆ.ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆರೈತರಿಗೆ ಬೆಳೆ ಪರಿಹಾರ ಹಣ ಸಿಗಬೇಕಿದೆ.ಬೆಳಗಾವಿ ಕಬ್ಬು ಬೆಳೆಗಾರರಿಗೂ ಸರ್ಕಾರ ಅನ್ಯಾಯ ಮಾಡಿದೆ.ಈರುಳ್ಳಿ ದರ ಕುಸಿತಕ್ಕೆ ರೈತರು ಕಂಗಾಲಾಗಿದ್ದಾರೆ.ಸರ್ಕಾರ ರೈತರನ್ನ ಬೀದಿಗೆ ಹಾಕಿದೆ.ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕಿತ್ತು. ರಾಜ್ಯದಲ್ಲಿ ಎಲ್ಲಾ ಕಾರ್ಯಕ್ರಮ ನಿಲ್ಲಿಸುವ ಕೆಲಸ ಸರ್ಕಾರ ಮಾಡಿದೆ.ಕೇಂದ್ರದ ಯೋಜನೆ ಯಥಾಸ್ಥಿತಿಯಲ್ಲಿ ಜಾರಿಗೆ ತರಬೇಕುಸಿದ್ದರಾಮಯ್ಯ ಸಿಎಂ ಆಗಿ ಅನುಭವ ಇದೆ. ಆದರೆ ಅವರೇ ಬೆಳಿಗ್ಗೆ ಆದರೆ ನಾನೇ ಸಿಎಂ ಎಂದು ಹೇಳುತ್ತಾರೆ. 2 ಸಾವಿರಕ್ಕೂ ಅಧಿಕ ಮಂದಿ ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತುಂಗಾಭದ್ರಾ ಡ್ಯಾಂ ನೀರು ಎರಡು ಬೆಳೆಗಳಿಗೆ ನೀರು ಕೊಟ್ಟಿಲ್ಲರಾಜ್ಯದಲ್ಲಿ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲಇದೇ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
































