ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿರಲು ಎಲ್ಲರೂ ಬಯಸುತ್ತಾರೆ. ವಿಂಟರ್ ಸೀಸನ್‌ನ ರೋಮ್ಯಾಂಟಿಕ್ ವೆದರ್ ಎಂಥವರನ್ನೂ ಕಂಗೆಡಿಸಿಬಿಡುತ್ತದೆ.
ನಂಗೂ ಲೈಫ್ ಪಾರ್ಟನರ್ ಇರ್ಬಾದಿತ್ತಪ್ಪಾ ಅಂತ ಹಂಬಲಿಸೋ ಸಮಯ. ಈ ಸಮಯದಲ್ಲಿ ದೈಹಿಕ ಸಂಪರ್ಕ ಹೊಂದುವುದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಇದು ಶಾಖದಿಂದ ತುಂಬಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ದೇಹದ ಉಷ್ಣತೆಯನ್ನು ನೀವು ಪಡೆಯುತ್ತೀರಿ.
ಇದು ನಿಮಗೆ ಆನಂದವನ್ನು ನೀಡುತ್ತದೆ. ಚಳಿಗಾಲದಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರುವುದರಿಂದ, ಈ ಸಮಯದಲ್ಲಿ ಮಿಲನ ಹೊಂದುವುದು ಆರೋಗ್ಯಕರ ವಿಚಾರ. ವಿಂಟರ್ ಸೀಸನ್‌ನಲ್ಲಿ ಮಿಲನದ ವೇಳೆ ಮುದ್ದಾಡುವುದು ಉತ್ತಮ ಅನುಭವ ನೀಡುವುದರ ಜತೆಗೆ ದೇಹವನ್ನು ಬೆಚ್ಚಗಾಗಿಸಲು ಉತ್ತಮ ಮಾರ್ಗ.
ಚಳಿಗಾಲದಲ್ಲಿ ಲೈಂಗಿಕತೆಯು ಹೆಚ್ಚು ಆರಾಮದಾಯಕ ಮತ್ತು ಉಲ್ಲಾಸಮಯವಾಗಿರುತ್ತದೆ. ಅಲ್ಲದೇ ಈ ಸಮಯದಲ್ಲಿ ದಂಪತಿ ಉಷ್ಣತೆ ಪಡೆಯುವುದರ ಜತೆಗೆ ಬೆಚ್ಚಗಿರುತ್ತಾರೆ. ಸಾಕ್ಸ್ ಧರಿಸಿ ಮಿಲನ ಹೊಂದುವುದು ಬಹಳ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಮಹಿಳೆಯರು ಹೀಗೆ ಮಾಡುವುದರಿಂದ ಬೇಗನೆ ಪರಾಕಾಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.