ಬೆಂಗಳೂರು : ಬಿಜೆಪಿ ಆಫರ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು. ಬಿಜೆಪಿ ನೀಡಿದ ಆಫರ್ ಬಗ್ಗೆ ಡಿಸಿಎಂ ಡಿಕೆಶಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಪುಸ್ತಕ ಬಿಡುಗಡೆ ವೇಳೆ ಅವರು ಮಾತನಾಡಿದ್ದಾರೆ.
ನನಗೆ ಡಿಸಿಎಂ ಆಗ್ತೀರಾ..? ಜೈಲಿಗೆ ಹೋಗ್ತೀರಾ ಅಂತ ಆಫರ್ ಕೊಟ್ರು..ಆದರೆ ನಾನು ಪಕ್ಷ ನಿಷ್ಠೆಯಿಂದ ಜೈಲಿಗೆ ಹೋಗುತ್ತೀನಿ ಎಂದೆ. ನಾನು ಮನಸ್ಸು ಮಾಡಿದ್ರೆ ಅವತ್ತೇ ಡಿಸಿಎಂ ಆಗುತ್ತಿದ್ದೆ. ದೆಹಲಿಯಿಂದ ಯಾರೋ ನನಗೆ ಫೋನ್ ಮಾಡಿದ್ರು, ಅವರ ಹೆಸರು ಹೇಳಲ್ಲ.
ನೀವು ಡಿಸಿಎಂ ಆಗ್ತೀರೋ..ಜೈಲಿಗೆ ಹೋಗ್ತೀರೋ ಎಂದು ಕೇಳಿದ್ರು,.ಎರಡರಲ್ಲಿ ಒಂದು ಆಯ್ಕೆ ಮಾಡಿ ಎಂದಿದ್ದರು. ಏನು ಮಾಡೋದು ಹೇಳಿ..ಪಕ್ಷದ ನಿಷ್ಠೆ..ಅದಕ್ಕೆ ನಾನು ಜೈಲಿಗೆ ಹೋಗುತ್ತೀನಿ ಎಂದು ಹೇಳಿದೆ ಎಂದು ಡಿಸಿಎಂ ಡಿಕೆಶಿ ಹೇಳಿದರು.ರಾಜಕೀಯದಲ್ಲಿ ಯಾವುದು ನಿಂತ ನೀರಲ್ಲ. ನಾನು ಮುಂದಿನ 8-10 ವರ್ಷ ರಾಜಕಾರಣ ಮಾಡಬಹುದು. ಹೊಸಬರಿಗೆ ಅವಕಾಶಗಳು ಸಿಗಬೇಕು ಎಂದಿದ್ದಾರೆ.