ಮುಂಬೈ: ಬಿ. ಆರ್. ಚೋಪ್ರಾ ಅವರ ‘ಮಹಾಭಾರತ’ ಸೀರಿಯಲ್‌ನಲ್ಲಿ ಕರ್ಣನ ಪಾತ್ರದಲ್ಲಿ ಅಭಿನಯಿಸಿದ್ದ ಬಾಲಿವುಡ್‌ನ ಖ್ಯಾತ ನಟ ಪಂಕಜ್ ಧೀರ್ (68) ಇದೀಗ ನಿಧನರಾಗಿದ್ದಾರೆ.
ಇವರು, ಈ ಕರ್ಣನ ಪಾತ್ರದಿಂದಾಗಿ ಭಾರಿ ಖ್ಯಾತಿ ಗಳಿಸಿದ್ದರು. ಇದಲ್ಲದೆ ಡಿಡಿಯ ಹಲವು ಸೀರಿಯಲ್‌ಗಳು ಮತ್ತು ಚಿತ್ರಗಳಲ್ಲಿ ಅವರ ಪಾತ್ರಗಳು ಜನರ ಹೃದಯಗಳನ್ನು ಗೆದ್ದಿದ್ದರು. ಕಳೆದ ಕೆಲವು ವರ್ಷಗಳಿಂದ ಮಾರಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.