ಮುಂಬೈ; ಖ್ಯಾತ ಸಿನಿಮಾ ನಿರ್ದೇಶಕ, ಸಾಕ್ಷ್ಯಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ (90) ನಿಧನರಾಗಿದ್ದಾರೆ.
ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಇಂದು ಸಂಜೆ ವಿಧಿವಶರಾಗಿದ್ದಾರೆ.
ಮಂಥನ್ ಮತ್ತು ‘ಜುಬೇದಾ’ ಚಿತ್ರಗಳ ಮೂಲಕವೇ ಹೆಸರುವಾಸಿಯಾದ ಶ್ಯಾಮ್ ಬೆನಗಲ್ ಅವರು ಡಿ. 14ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಬೆನಗಲ್ ಅವರಿಗೆ ಭಾರತ ಸರ್ಕಾರವು 1976ರಲ್ಲಿ ಪದ್ಮಶ್ರೀ ಮತ್ತು 1991ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿತ್ತು.