ಲಕ್ನೋ: ಮಧುಮೇಹಿ ಮಗಳಿಗೆ ಇನ್ಸುಲಿನ್ ತರಲು ಹಣವಿಲ್ಲ ಎಂದು ವೀಡಿಯೋ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಅಸಹಾಯಕ ತಂದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃ*ತ ವ್ಯಕ್ತಿ ರಿಯಲ್ ಎಸ್ಟೇಟ್ ಡೀಲರ್ ಶಹಬಾಜ್ ಶಕೀಲ್ ಎಂದು ಗುರುತಿಸಲಾಗಿದೆ. ಆತ್ಮಹ*ತ್ಯೆಗೂ ಮುನ್ನ ಶಕೀಲ್ ವಿಡಿಯೋ ಮಾಡಿ, ಅದರಲ್ಲಿ ತಮ್ಮ ನೋವೆಲ್ಲಾ ಹಂಚಿಕೊಂಡು, ಬಳಿಕ ಸೆಕ್ಯುರಿಟಿ ಗಾರ್ಡ್ ಬಳಿ ಇದ್ದ ಗನ್ನಿಂದ ಶೂ*ಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡಲು ಹೋದ ವ್ಯಕ್ತಿ ಹೃದಯಾ*ಘಾತಕ್ಕೆ ಬ*ಲಿ ಮಗಳು ಮಧುಮೇಹದಿಂದ ಬಳಲುತ್ತಿದ್ದಾಳೆ, ಆಕೆಗೆ ಇನ್ಸುಲಿನ್ ಖರೀದಿ ಮಾಡಲು ನನ್ನ ಬಳಿ ಹಣವಿಲ್ಲ ಎಂದು ಅಸಹಾಯಕ ತಂದೆ ಕಣ್ಣೀರಿಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋಟಿಗಟ್ಟಲೆ ಸಾಲ ಮಾಡಿದ್ದು, ಅವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಎಂಬುದು ತಿಳಿದುಬಂದಿದೆ.