ಆಧುನಿಕ ಯುಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಬಹಳಷ್ಟು ಸರಳವಾಗುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗಲುವು ಕೆಲ ಬ್ಯಾಂಕ್‌ಗಳು ಹಣಕಾಸು ಸೇವೆ ಒದಗಿಸಲು ಹೊಸ ಮತ್ತು ಸರಳಿಕೃತ ವಿಧಾನವನ್ನು ಅನುಸರಿಸುತ್ತಿದೆ. ಇದೀಗ ಸೌತ್ ಇಂಡಿಯನ್ ಬ್ಯಾಂಕ್(ಎಸ್‌ಐಬಿ) SIB ಕ್ವಿಕ್ FD ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಯಾರೂ ಬೇಕಾದರೂ ಸ್ಥಿರ(Fixed Deposit) ಠೇವಣಿ ಇಡಬಹುದು.ಈ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಹೇಗೆಂಬುದು ತಿಳಿಯೋಣ.
ಬ್ಯಾಂಕ್ ಖಾತೆ ಇಲ್ಲದಿದ್ದರೂ ಎಫ್‌ಡಿಗೆ ಅವಕಾಶ
ಎಸ್ಐಬಿ ಕ್ವಿಕ್ ಎಫ್‌ಡಿ ಹೊಸ ಯೋಜನೆಯಡಿಯಲ್ಲಿ ಠೇವಣಿ ಇಡಲು ಸೌತ್ ಇಂಡಿಯನ್ ಬ್ಯಾಂಕ್‌ನ ಖಾತೆ ಹೊಂದಿರುವವರು ಮಾತ್ರವಲ್ಲ, ಬೇರೆ ಯಾರೂ ಠೇವಣಿ ಇಡಬಹುದು. ಅಂದರೆ, ಬ್ಯಾಂಕ್ ಖಾತೆ ಹೊಂದಿಲ್ಲದವರಿಗೂ ಇದು ಎಫ್‌ಡಿ ಇಡಲು ಅನುಮತಿಸುತ್ತದೆ. ಈ ಪ್ರಕ್ರಿಯೆಯು ಬಹಳ ಸರಳವಾಗಿದೆ. ಇದರ ಎಲ್ಲಾ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. KYC ಸಲ್ಲಿಸುವುದು ಒಂದೇ ಪ್ರಮುಖ ಕೆಲಸ. ನಿಮ್ಮ ಪ್ಯಾನ್ ಮತ್ತು ಆಧಾರ್ ದಾಖಲೆಗಳ ಆನ್‌ಲೈನ್ ಪ್ರತಿ ಸಿದ್ಧವಾಗಿದ್ದರೆ, ನೀವು ಕೇವಲ ಐದು ನಿಮಿಷಗಳಲ್ಲಿ SIB ಯೊಂದಿಗೆ ಸ್ಥಿರ ಠೇವಣಿ ಯೋಜನೆಯನ್ನು ಪ್ರಾರಂಭಿಸಬಹುದು.
UPI ಮೂಲಕ ಹಣ ಸಂದಾಯ
ನೀವು ಯಾವುದೇ ಸಮಯದಲ್ಲೂ ಆನ್‌ಲೈನ್‌ನಲ್ಲಿ ಎಸ್ಐಬಿ ಕ್ವಿಕ್ ಎಫ್‌ಡಿ ತೆರೆಯಬಹುದು. ಅಲ್ಲದೆ, ಆನ್‌ಲೈನ್ ಮೂಲಕ ಯಾವುದೇ ಯುಪಿಐ ಮತ್ತು ಬ್ಯಾಂಕ್ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. FDಗೆ ಕನಿಷ್ಠ ಮೊತ್ತ 1,000 ರೂ. ಠೇವಣಿ ಇಡಬಹುದು. ನಿಮ್ಮ ವಿವಿಧ ಅಗತ್ಯಗಳಿಗೆ ಇದು ಅನುಕೂಲಕರವಾಗಿದೆ. ಠೇವಣಿಯ ಮೇಲಿನ ಬಡ್ಡಿಯೂ ಆಕರ್ಷಕವಾಗಿದೆ. ಗಡುವಿನ ಮೊದಲು ಠೇವಣಿಗಳನ್ನು ಹಿಂಪಡೆಯಲು ಅವಕಾಶಗಳಿವೆ. ಐದು ಲಕ್ಷ ರೂಪಾಯಿಗಳವರೆಗಿನ ಮೊತ್ತಕ್ಕೆ ವಿಮಾ ರಕ್ಷಣೆಯೂ ಇದೆ.