ಕಲಬುರಗಿ: ಆರೋಪಿಗೆ 1 ಎಕರೆ ಮಾತ್ರ ಇದೆ. ಆದರೆ ಕಳೆದ ಅ.28ರಂದು ನಡೆದಿದ್ದ FDA ಪರೀಕ್ಷೆ ವೇಳೆ ಅಕ್ರಮ ಎಸಗುತ್ತಾ ಸಿಕ್ಕಿಬಿದ್ದಿದ್ದ ಕಲಬುರಗಿ ಜಿಲ್ಲೆಯ ಆಫಲ್ಪುರದ ಆರೋಪಿ ಸಿದ್ರಾಮನ ಖಾತೆಯಲ್ಲಿ ಕೆಲವೇ ದಿನಗಳಲ್ಲಿ 1.5 ಕೋಟಿ ರೂ. ವರ್ಗಾವಣೆಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಆದರೆ ಆತನ ಖಾತೆಯಲ್ಲಿ ಭಾರೀ ವಹಿವಾಟು ನಡೆದಿದ್ದು, ಹಲವು ಅನುಮಾನ ಮೂಡಿದೆ. ಮಹಜರು ಪ್ರಕ್ರಿಯೆಗೆ ತೆರಳಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.