ಚಿಕ್ಕಮಗಳೂರು: ಬಿಜೆಪಿ ಎಂಎಲ್‍ಸಿ ಸಿ.ಟಿ.ರವಿ (CT Ravi) ಚಿಕ್ಕಮಗಳೂರಿಗೆ (Chikkamagaluru) ಬಂದಾಗ ಸ್ವಾಗತಿಸಲು ಬಂದಿದ್ದ 7 ಆಂಬುಲೆನ್ಸ್‌ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಾಗಡಿ ಕೈಮರದಿಂದ ಸೈರನ್ ಹಾಕಿಕೊಂಡು ಆಂಬುಲೆನ್ಸ್‌ಗಳು ಬಂದಿದ್ದವು. ರೋಗಿಗಳು ಇಲ್ಲದೇ ಸೈರನ್ ಹಾಗೂ ಟಾಪ್ ಲೈಟ್ ಹಾಕಲಾಗಿತ್ತು. ಸೈರನ್ ಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ. ನಗರದ ಠಾಣೆಯಲ್ಲಿ 7 ಆಂಬುಲೆನ್ಸ್‌ಗಳ ಮೇಲೆ ಎಫ್‍ಐಆರ್ ದಾಖಲಾಗಿದೆ
ಬಿಎನ್‍ಎಸ್ 177, 285 ಹಾಗೂ 292ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಸದನದಲ್ಲಿ ಅವಾಚ್ಯ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಚಿಕ್ಕಮಗಳೂರಿಗೆ ಶನಿವಾರ ವಾಪಸ್ ಆಗಿದ್ದರು.