ಕಲಬುರಗಿ: ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಮದುವೆಯಾದರೆ ತಲಾ ಐದು ಲಕ್ಷ ರೂ ನೀಡುತ್ತೇನೆಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ, ಹಿಂದೂ ಯುವಕರಿಗೆ ಪ್ರಚೋದಿಸಿದ ಆರೋಪದಡಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.!
ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ದೂರು ನೀಡಿದ್ದು, ಕಲಂ 196, 299, 353(1)(c), 353(2)ಅಡಿ ಕೇಸ್ ದಾಖಲಾಗಿದೆ. ಒಂದು ಸಮುದಾಯವನ್ನು ವಿಭಜನೆ ದ್ವೇಷ ಹೇಳಿಕೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.