ಬೆಂಗಳೂರು: ಕೋವಿಡ್ ಹಗರಣದ ಕುರಿತು ಖಾಸಗಿ ಕಂಪನಿಗಳು ಮತ್ತು ವೈದ್ಯಕೀಯ ಇಲಾಖೆಯ ಅಧಿಕಾರಿಗಳ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಸ್ಟಿಸ್ ಕುನ್ಹಾ ವರದಿ ಆಧಾರದ ಮೇಲೆ ಹಲವಾರು ರೀತಿಯ ಕ್ರಮ ಆಗೋದು ಅನಿವಾರ್ಯ, ಕೋವಿಡ್ ಸಮಯದಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ, ಕೆಲವು ಕಡೆ ಅನಾವಶ್ಯಕವಾಗಿ ಬೆಲೆ ಹೆಚ್ಚು ಕೊಟ್ಟ ಖರೀದಿ ಮಾಡಿದ್ದಾರೆ ಅಲ್ಲದೇ ಬೋಗಸ್ ಕಂಪನಿಗೆ ಆರ್ಡರ್ ಕೊಟ್ಟಿದ್ದಾರೆ.
ಹೀಗಾಗಿ ಕಾನೂನಿನ ಪ್ರಕಾರ ಏನೂ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳಬೇಕು. ಒಂದೊಂದು ಪ್ರಕರಣ ಒಂದೊಂದು ರೀತಿ ಇದೆ. ಈಗ ಕೆಲವರ ಮೇಲೆ ಎಫ್ ಐ ಆರ್ ದಾಖಲಾಗಿದೆ ಇನ್ನೂ ತೆನಿಖೆ ಮಾಡೋದಿದೆ.ಕುನ್ಹಾ ಕೊಟ್ಟಿರುವ ಸಾವಿರಾರು ಪುಟಗಳ ವರದಿ ಇದೆ ಆದ್ರ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಬೇಕು ಅದ್ರ ಪ್ರಕಾರ ಈಗ ಎಫ್ ಐಆರ್ ದಾಖಲಾಗಿದೆ ಎಂದರು.
ಇನ್ನೂ ಈ ಕುರಿತಂತೆ ಎಸ್ ಐಟಿ ರಚನೆ ಮಾಡುವ ಬಗ್ಗೆ ಮಾತನಾಡಿದ ಅವರು, ಎಸ್ ಐಟಿ ರಚಿಸಬೇಕು ಅಂತ ಇದೆ ಇದರ ಕುರಿತು ಹಿಂದೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಿತ್ತು ಈಗ ಎಫ್ ಐಆರ್ ಆಗಿದೆ, ನಂತರ ಹೋಮ್ ಡಿಪಾರ್ಟ್ಮೆಂಟ್ ತೀರ್ಮಾನ ಆಗಬೇಕು ಹಲವಾರು ಎಫ್ ಐಆರ್ ರಿಜಿಸ್ಟರ್ ಆಗೋಕೆ ತಯಾರಾಗುತ್ತದೆ ಎಂದು ತಿಳಿಸಿದರು.