ಲಕ್ನೋ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಕೊಲೆಯಾದ ಸ್ಥಿತಿಯಲ್ಲಿ ಬುಧವಾರ(ಜ1) ಬೆಳಗ್ಗೆ ಪತ್ತೆಯಾಗಿದ್ದು,ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.
ಕೇಂದ್ರ ಲಕ್ನೋದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ, ರಾಜ್ಯ ರಾಜಧಾನಿಯ ನಾಕಾ ಪ್ರದೇಶದ ಹೋಟೆಲ್ ನಲ್ಲಿ ಈ ಭೀಕರ ಘಟನೆ ನಡೆದಿದೆ ಎಂದು ಹೇಳಿದ್ದಾರೆ.“ಅರ್ಷದ್ (24) ಎಂದು ಗುರುತಿಸಲಾದ ಆರೋಪಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹ*ತ್ಯೆಗೈದಿದ್ದಾನೆ. ಭೀಕರ ಕೃತ್ಯದ ನಂತರ, ಸ್ಥಳೀಯ ಪೊಲೀಸರು ಅಪರಾಧದ ಸ್ಥಳದಿಂದಲೇ ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ. ಹ*ತ್ಯೆಗೀಡಾದವರನ್ನು ಆಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ.