ವಾರಾಣಸಿ: 50 ಗಂಟೆಗಳಿಂದ ನಿರಂತರ ಮಳೆಗೆ ಸಾಕ್ಷಿಯಾಗಿರುವ ಉತ್ತರಪ್ರದೇಶದಲ್ಲಿ ಗಂಗಾ, ಚಂಬಲ್, ಯಮುನಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 12ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿ ಅವಘಡಗಳಿಗೆ ಈವರೆಗೂ ಮೃತಪಟ್ಟಿದ್ದಾರೆ.
ವಾರಾಣಸಿ, ಪ್ರಯಾಗ್‌ರಾಜ್, ಕಾನ್ಸುರಗಳು ಅತೀ ಹೆಚ್ಚು ಪ್ರವಾಹ-ಪೀಡಿತ ವಲಯಗಳಾಗಿವೆ. ವಾರಾಣಸಿಯಲ್ಲಿ ಗಂಗಾ ನದಿಯ ಪ್ರವಾಹದಲ್ಲಿ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ ಸ್ಮಶಾನಗಳು ಸೋಮವಾರ ಸಂಪೂರ್ಣವಾಗಿ ಮುಳುಗಿದ್ದವು.
ಹೀಗಾಗಿ ಮಣಿಕರ್ಣಿಕಾ ಘಾಟ್‌ನ ಮೇಲ್ಬಾಗದ ರುದ್ರಭೂಮಿಯಲ್ಲಿ, ಹರಿಶ್ಚಂದ್ರ ಘಾಟ್ ಸಮೀಪದ ಬೀದಿಗಳಲ್ಲಿ ಮಾತ್ರವೇ ಅಂತ್ಯ ಸಂಸ್ಕಾರ ಪ್ರಕ್ರಿಯೆ ನಡೆಸಲಾಗಿದ್ದು, ಮೃತರ ಅಂತ್ಯಕ್ರಿಯೆಗಾಗಿ ಜನರು ಗಂಟೆಗಟ್ಟಲೆ ಕಾಯುತ್ತಿದ್ದ ಪರಿಸ್ಥಿತಿ ಕಂಡುಬಂದಿತು.