ಹೈದರಾಬಾದ್: ಏಕೆಂದರೆ ತಿರುಮಲದ ಪಾವಿತ್ರ್ಯತೆ ಮತ್ತು ಅಧ್ಯಾತ್ಮಿಕ ಶಾಂತಿ ಕಾಪಾಡಲು ತಿರುಮಲದಲ್ಲಿ ರಾಜಕೀಯ ಹಾಗೂ ದ್ವೇಷದ ಭಾಷಣಗಳಿಗೆ ಟಿಟಿಡಿ ನಿಷೇಧ ಹೇರಿದೆ.
ಸದಾ ಗೋವಿಂದಾ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವ- ಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಮುಖಂಡರು ತಿರುಮಲ ದೇವಸ್ಥಾನದ ದರ್ಶನದ ನಂತರ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆ ನೀಡಿ ಆಧ್ಯಾತ್ಮಿಕ ವಾತಾವರಣವನ್ನು ಕದಡುತ್ತಿ- ದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧ ಹೇರುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಟಿಟಿಡಿ ಮಂಡಳಿ ಹೇಳಿದೆ.
ಟಿಟಿಡಿ ಕೂಡ ತನ್ನ ನಿರ್ಧಾರಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದು ತಿಳಿಸಿದೆ.